Www.cnewstv.in / 13.03.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಮಲೆನಾಡು ಭಾಗದ ಮೂತ್ರ ಪಿಂಡ ಸಮಸ್ಯೆಗಳ
ರೋಗಿಗಳಿಗೆ ಎನ್.ಯು. ಆಸ್ಪತ್ರೆ ದಾರಿ ದೀಪವಾಗಿದೆ.
ಶಿವಮೊಗ್ಗ : ಎನ್.ಯು. ಆಸ್ಪತ್ರೆಯಲ್ಲಿ ರಕ್ತದ ಗುಂಪು
ಹೊಂದಾಣಿಕೆಯಾಗದ ವ್ಯಕ್ತಿಗಳಿಗೂ ಕೂಡ ಕಿಡ್ನಿ ಟ್ರಾನ್ಸ್ ಪ್ಲಾಂಟ್ (ಮೂತ್ರ ಪಿಂಡ ಕಸಿ) ಮಾಡಬಹುದು. ಈಗಾಗಲೇ 10ಕ್ಕೂ ಹೆಚ್ಚು ಮೂತ್ರ ಪಿಂಡ ಕಸಿಯನ್ನು ನಾವು ಯಶಸ್ವಿಯಾಗಿ ಮಾಡಿದ್ದೇವೆ ಎಂದು ಆಸ್ಪತ್ರೆಯ ತಜ್ಞ ವೈದ್ಯ ಡಾ. ಪ್ರವೀಣ್ ಮಾಳವದೆ ಹೇಳಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡು ಭಾಗದ ಮೂತ್ರ ಪಿಂಡ ಸಮಸ್ಯೆಗಳ
ರೋಗಿಗಳಿಗೆ ಎನ್.ಯು. ಆಸ್ಪತ್ರೆ ದಾರಿ ದೀಪವಾಗಿದೆ. ಕಳೆದ 2023ರ ಏಪ್ರಿಲ್‌ನಿಂದ ಇಲ್ಲಿಯವರೆಗೆ 10
ಮೂತ್ರ ಪಿಂಡ ಕಸಿಯನ್ನು ಅತಿ ಕಡಿಮೆ ಅವಧಿಯಲ್ಲಿ ಯಶಸ್ವಿಯಾಗಿ ಮಾಡಿದ್ದೇವೆ. ಮಲೆನಾಡಿಗರ
ಪಾಲಿಗೆ ಇದೊಂದು ಸಂತಸದ ಸುದ್ದಿಯೇ ಆಗಿದೆ. ದೂರದ ಆಸ್ಪತ್ರೆ ಗಳಿಗಿಂತ ಹೆಚ್ಚು ನಿಖರವಾಗಿ ಮತ್ತು ಯಶಸ್ವಿಯಾಗಿ ನಾವು ಶಸ್ತ್ರ ಚಿಕಿತ್ಸೆ ಮಾಡಿ ಮಹತ್ವದ ಮೈಲಿಗಲ್ಲು ಸ್ಥಾಪಿಸಿದ್ದೇವೆ ಎಂದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಇದನ್ನು ಒದಿ..