ಯಡಿಯೂರಪ್ಪನವರ ಎದೆ ಬಗೆದರೆ ಒಂದು ಕಡೆ ಮಕ್ಕಳು ಮತ್ತೊಂದು ಕಡೆ ಶೋಭಾ ಇದ್ದಾರೆ..

Cnewstv / 15.03.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಯಡಿಯೂರಪ್ಪನವರ ಎದೆ ಬಗೆದರೆ ಒಂದು ಕಡೆ ಮಕ್ಕಳು ಮತ್ತೊಂದು ಕಡೆ ಶೋಭಾ ಇದ್ದಾರೆ..

ಶಿವಮೊಗ್ಗ : ಯಡಿಯೂರಪ್ಪನವರ ಎದೆ ಬಗೆದರೆ ಒಂದು ಕಡೆ ಮಕ್ಕಳು ಮತ್ತೊಂದು ಕಡೆ ಶೋಭಾ ಇದ್ದಾರೆ ಅಂತ ಕಾರ್ಯಕರ್ತರು ಹೇಳುತ್ತಿದ್ದಾರೆ‌ ನಾನು ಹೇಳುತ್ತಿಲ್ಲ ಎಂದು
ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಇಂದು ಶಿವಮೊಗ್ಗದಲ್ಲಿ ಗುಡುಗಿದ್ದಾರೆ..

ಸಿಟಿ.ರವಿ, ಸದಾನಂದ ಗೌಡ, ಪ್ರತಾಪ್, ಕಟೀಲ್‌ಗೆ ಟಿಕೆಟ್ ಏಕೆ ತಪ್ಪಿತು. ಇವರೆಲ್ಲಾ ಹಿಂದುತ್ವದ ಪರವಾಗಿ ಗಟ್ಟಿಯಾಗಿ ಹೋರಾಟ ಮಾಡುವ ಕಾರ್ಯಕರ್ತರು. ಆದರೆ, ಸದಾನಂದ ಗೌಡರಿಗೆ ಟಿಕೆಟ್ ತಪ್ಪಿಸಿ ಶೋಭಾಗೆ ನೀಡುವ ಅಗತ್ಯವೇನಿತ್ತು ? ಹಿಂದುತ್ವದ ಪ್ರತಿಪಾದಕರಿಗೆ ಅನ್ಯಾಯವಾಗಿದೆ. ಹಠ ಹಿಡಿದು ತನ್ನ ಮಗನಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಿಸಿದ್ರು. ರಾಜ್ಯದ ನೊಂದ ಕಾರ್ಯಕರ್ತರ ಧ್ವನಿಯಾಗುವುದು ಬೇಡವೆ ?

ಬಿಎಸ್ವೈ ಹೃದಯ ನೋಡಿದ್ರೇ ಗೊತ್ತಾಗುತ್ತೇ, ಹೃದಯದಲ್ಲಿ ಅವರ ಮಕ್ಕಳು ಒಂದು ಕಡೆ. ಇನ್ನೊಂದು ಕಡೆ ಶೋಭಾ ಇದ್ದಾರೆ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ‌ ನಾನು ಹೇಳುತ್ತಿಲ್ಲ ಎಂದರು.

ಹಿಂದುತ್ವಕ್ಕಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಕೆಎಸ್ ಈಶ್ವರಪ್ಪ ಸ್ಪರ್ಧೆ. ‌

ಶಿವಮೊಗ್ಗ : ನಲವತ್ತು ವರ್ಷ ಪಕ್ಷಕ್ಕೆ ಕೆಲಸ ಮಾಡಿದ್ದೇನೆ. ಎಂದೂ ಪಕ್ಷ ಬಿಟ್ಟು‌ ಹೋಗಲ್ಲ. ನನ್ನ ಕಣ್ಣ ಮುಂದೆ ತಾಯಿಯ ಕುತ್ತಿಗೆ ಹಿಚುಕಿ ಸಾಯಿಸುತ್ತಿದ್ದರೆ ಸುಮ್ಮನೆ ಕೂರಬೇಕೆ.? ಎಂಎಲ್‌ಸಿ ಮಾಡುತ್ತೇವೆ ಎಂದು ಬಿಎಸ್‌ವೈ ಹೇಳುತ್ತಿದ್ದಾರೆ.
ಇದು ಕೇವಲ ಸುಳ್ಳು. ತಮಗೆ ಬೇಕಾದವರಿಗೆ ಟಿಕೆಟ್ ನೀಡಿದ್ದಾರೆ. ಅವರಲ್ಲಿ ಯಾರಾದರೂ ಸೋತರೆ ಅದಕ್ಕೆ ಬಿಎಸ್‌ವೈ ಹೊಣೆ. ನಾನು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರೆ, ಎರಡು ತಿಂಗಳ ಒಳಗೆ ಎಲ್ಲರನ್ನೂ ಪಕ್ಷಕ್ಕೆ ಮರಳಿ‌ ಕರೆ ತರುತ್ತಾರೆ..ಹಿಂದುತ್ವಕ್ಕಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಕೆಎಸ್ಈ ಸ್ಪರ್ಧಿಸುತ್ತೇನೆ. ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.

#KSEshwarappa #Shivamogga #MPElection #Modhi #Independent #2024 #BSY #BYRagavendra

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*