Cnewstv / 03.01.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಬೆಂಗಳೂರಿಗೆ ತೆರಳಲು ಶಿವಮೊಗ್ಗ ಏರ್ಪೋರ್ಟ್ ನಲ್ಲಿ ಕಾದು ಕುಳಿತ ಮೂವರು ಸಚಿವರು…
ಶಿವಮೊಗ್ಗ : ಬೆಂಗಳೂರಿಗೆ ತೆರಳಲು ಮೂವರು ಸಚಿವರು ಶಿವಮೊಗ್ಗ ಏರ್ಪೋರ್ಟ್ ನಲ್ಲಿ ಕಾದು ಕುಳಿತ ಘಟನೆ ಇಂದು ನಡೆದಿದೆ.
ಬೆಂಗಳೂರು ಶಿವಮೊಗ್ಗ ಇಂಡಿಗೋ ವಿಮಾನ ನಿಲ್ದಾಣ ಲ್ಯಾಂಡಿಂಗ್ ಸಮಸ್ಯೆ ಆದ ಹಿನ್ನೆಲೆಯಲ್ಲಿ ವೈದ್ಯಕೀಯ ಸಚಿವ ಶರಣ್ ಪ್ರಕಾಶ್ ಪಾಟೀಲ್, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್ ವಿಮಾನಕ್ಕೆ ಕಾಯುತ್ತಾ ಕುಳಿತಿದ್ದರು.
ಶಿವಮೊಗ್ಗದಲ್ಲಿ ವಿಸಿಬಿಲಿಟಿ ಇಲ್ಲದ ಹಿನ್ನೆಲೆಯಲ್ಲಿ ಲ್ಯಾಂಡಿಂಗ್ ವಿಳಂಬವಾಗಿದೆ. ಮೋಡಕವಿದ ವಾತಾವರಣವಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದಲೇ ತಡವಾಗಿ ಹೊರಟಿದೆ ಆದರೂ ಕೂಡ ಶಿವಮೊಗ್ಗದಲ್ಲಿ ಮೋಡ ಕವಿದ ವಾತಾವರಣದ ಹಿನ್ನೆಲೆಯಲ್ಲಿ ಇಂಡಿಗೋ ವಿಮಾನ ಲ್ಯಾಂಡಿಂಗ್ ಸಮಸ್ಯೆ ಆಗಿದೆ.
ಪ್ರತಿದಿನ ಬೆಳಗ್ಗೆ 9:50ಕ್ಕೆ ಬೆಂಗಳೂರಿನಿಂದ ಹೊರಟು, 11:05ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿತ್ತು. ಅದರೆ ಇಂದು ಶಿವಮೊಗ್ಗ ಏರ್ಪೋರ್ಟ್ಅನ್ನು 30 ನಿಮಿಷಗಳ ಕಾಲ ಎಂಟಕ್ಕೂ ಹೆಚ್ಚು ರೌಂಡ್ ಹೊಡದು ಲ್ಯಾಂಡ್ ಆಗಿದೆ. ಮಧ್ಯಾಹ್ನ 3.25 ಸುಮಾರಿಗೆ ಲ್ಯಾಂಡ್ ಆದ ವಿಮಾನ ಬಳಿಕ 3.45 ಕ್ಕೆ ಟೇಕ್ ಆಫ್ ಅಗಿ ಬೆಂಗಳೂರಿನತ್ತ ಹೊರಟಿತು.
#Shivamoggaairport #Indigo #visibility #madhubangarappa #Sharanprakashapatil #sudakar #waiting
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಇದನ್ನು ಒದಿ…