Www.cnewstv.in / 14.10.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಶಿವಮೊಗ್ಗದಲ್ಲಿ ಪರಿಸ್ಥಿತಿ ಇಷ್ಟುಬೇಗ ತಣ್ಣಗಾಗಿದ್ದು ಮಾಜಿ ಸಚಿವ ಈಶ್ವರಪ್ಪ ಅವರಿಗೆ ಇಷ್ಟವಾದಂತಿಲ್ಲ – ಆಯನೂರು ಮಂಜುನಾಥ್..
ಶಿವಮೊಗ್ಗ : ಶಿವಮೊಗ್ಗದಲ್ಲಿ ಪರಿಸ್ಥಿತಿ ಇಷ್ಟುಬೇಗ ತಣ್ಣಗಾಗಿದ್ದು ಮಾಜಿ ಸಚಿವ ಈಶ್ವರಪ್ಪ ಅವರಿಗೆ ಇಷ್ಟವಾದಂತಿಲ್ಲ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದ್ದಾರೆ.
ಕೆಪಿಸಿಸಿ ವಕ್ತಾರರಾದ ಬಳಿಕ ಮೊದಲ ಬಾರಿಗೆ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದ ಒಂದು ಸಣ್ಣ ಬಡಾವಣೆಯಲ್ಲಿ ನಡೆದ ಗಲಾಟೆಯನ್ನು ನಿಭಾಯಿಸುವಲ್ಲಿ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿದ್ದಾರೆ. ಇದರಿಂದ ನಗರದಲ್ಲಿ ಶಾಂತಿ ನೆಲೆಸಿದೆ. ಆದರೆ ಶಿವಮೊಗ್ಗದಲ್ಲಿ ಪರಿಸ್ಥಿತಿ ಇಷ್ಟುಬೇಗ ತಣ್ಣಗಾಗಿದ್ದು ಮಾಜಿ ಸಚಿವ ಈಶ್ವರಪ್ಪ ಅವರಿಗೆ ಇಷ್ಟವಾದಂತಿಲ್ಲ. ಅದಕ್ಕಾಗಿಯೇ ಈಗ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ನಲವತ್ತು ವರ್ಷದ ರಾಜಕೀಯ ಜೀವನದ ಅನುಭವ ಇರುವ ಅವರು ನಗರದಲ್ಲಿ ಶಾಂತಿ ಕದಡುವ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿರುವುದು ಅವರಿಗೆ ಶೋಭೆಯಲ್ಲ. ರಾಜ್ಯದಲ್ಲಿ ಕಾವೇರಿ ನೀರಾವರಿ ಸಮಸ್ಯೆ ಇದೆ. ನೀರಾವರಿ ಸಚಿವರೂ ಆಗಿದ್ದ ಈಶ್ವರಪ್ಪ ಅವರು ಎಂದೆಂದಿಗೂ ನೀರಾವರಿ ಕುರಿತು ಮಾತನಾಡೇ ಇಲ್ಲ ಎಂದರು. ಕಾವೇರಿ ವಿಷಯದಲ್ಲಿ ಈ ಹಿಂದೆ ಪ್ರಧಾನಿಯಾಗಿದ್ದ ವಾಜಪೇಯಿ ಅವರನ್ನು ಮಧ್ಯ ಪ್ರವೇಶಿಸುವಂತೆ ಮಾಡಿ ರಾಜ್ಯದ ಹಿತ ಕಾಪಾಡುವಲ್ಲಿ ಅಂದಿನ ಸಚಿವ ಅನಂತಕುಮಾರ್ ಶ್ರಮವಹಿಸಿದ್ದರು. ರೈತರ ಹಿತ ಕಾಯುವ ಕೆಲಸ ಮಾಡದ ಈಶ್ವರಪ್ಪ ಬಾಯಿಗೆ ಬಂದಂತೆ ಮಾತಾಡುವುದನ್ನು ನಿಲ್ಲಿಸಿ ರಾಜ್ಯದ ಹಿತದ ಜವಾಬ್ದಾರಿಯನ್ನು ನಿರ್ವಹಿಸಲಿ ಎಂದರು.
ಸಾಂವಿಧಾನಿಕ ಹುದ್ದೆಯಲ್ಲಿಲ್ಲದಿದ್ದರೂ ಪೈಲಟ್ ವಾಹನದ ಮುಂದಿಟ್ಟುಕೊಂಡು ಓಡಾಡಲು ಯಾವ ಅರ್ಹತೆ ಇದೆ ? ಅಧಿಕಾರ ಕಳೆದುಕೊಂಡ ತಕ್ಷಣ ದುಬೈನಿಂದ ಬೆದರಿಕೆ ಕರೆಗಳು ಬರುತ್ತವೆ. ಆ ತನಿಖೆ ಎಲ್ಲಿಗೆ ಬಂತು? ಸೈರನ್ ಹೊಡ್ಕೊಂಡ್ ಹೋಗುವುದಕ್ಕಿಂತ ಸದ್ದಿಲ್ಲದೆ ಓಡಾಡೋದು ಒಳ್ಳೆಯದು. ಕತ್ತಿ ಕೊಡುವುದಿದ್ದರೆ ಬಿಜೆಪಿ ಮುಖಂಡರು ತಮ್ಮ ಮಕ್ಕಳ ಕೈಗೆ ಕತ್ತಿ ಕೊಟ್ಟು ಬೀದಿಗೆ ಬಿಡಲಿ, ಕಾನೂನು ಏನು ಮಾಡುತ್ತೆ ಅನ್ನೋದು ಗೊತ್ತಾಗುತ್ತೆ ಎಂದ ಆಯನೂರು ಮಂಜುನಾಥ್ ಅವರ ಇಂತಹ ಸಣ್ಣತನದ ರಾಜಕಾರಣವನ್ನು ಬಿಡಬೇಕು ಎಂದು ಈಶ್ವರಪ್ಪ ಅವರಿಗೆ ಕಿವಿಮಾತು ಹೇಳಿದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments