Cnewstv / 12.09.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಬೇಕೇ ಬೇಕು ಆನೆಯ ಬೇಕು. ಸೋಶಿಯಲ್ ಮೀಡಿಯಾದಲ್ಲಿ ಆನೆಗಾಗಿ ಅಭಿಯಾನ.
ಶಿವಮೊಗ್ಗ : ಬೇಕೇ ಬೇಕು ಆನೆಯ ಬೇಕು ಎಂಬ ಪೋಸ್ಟ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ರದ್ದು ಮಾಡುತ್ತಿದೆ.
ಹೌದು ದಸರಾ ಮೆರವಣಿಗೆಗಾಗಿ ಆನೆ ನೀಡುವಂತೆ ತೀರ್ಥಹಳ್ಳಿಯ ಜನರು ಈ ರೀತಿಯ ವಿಭಿನ್ನವಾದ ಅಭಿಯಾನವನ್ನು ಆರಂಭ ಮಾಡಿದ್ದಾರೆ.
ಶಿವಮೊಗ್ಗ ದಸರಾಗೂ ಮೊದಲೇ ತೀರ್ಥಹಳ್ಳಿಯಲ್ಲಿ ದಸರಾ ಮೆರವಣಿಗೆಗಾಗಿ ಆನೆ ಬಳಸಲಾಗುತ್ತಿತ್ತು. ತೀರ್ಥಹಳ್ಳಿಯ ಪುರಾಣ ಪ್ರಸಿದ್ಧ ರಾಮೇಶ್ವರ ಹಾಗೂ ಚಾಮುಂಡೇಶ್ವರಿ ದೇವಿಯ ಉತ್ಸವಕ್ಕೆ ಅನೆಗಳನ್ನ ಬಳಸಲಾಗುತ್ತಿತ್ತು. ಅದರೆ ಕಳೆದ ಹತ್ತು ವರ್ಷದಿಂದ ತೀರ್ಥಹಳ್ಳಿಯಲ್ಲಿ ಜಂಬೂಸವಾರಿಯನ್ನು ದಸರಾ ಸಮಿತಿ ನಿಲ್ಲಿಸಿದೆ.
ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನ ಈ ತೀರ್ಥಹಳ್ಳಿಯ ದಸರಾ ಉತ್ಸವದಲ್ಲಿ ಭಾಗಿಯಾಗುತ್ತಾರೆ. ಈ ಬಾರಿ ಹಳೆಯ ಸಂಪ್ರದಾಯವನ್ನು ಮುಂದುವರೆಸಲು ತೀರ್ಥಹಳ್ಳಿಯ ಜನರು ಈ ರೀತಿಯ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಹಾಕುವ ಮೂಲಕ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದಾರೆ.
ಇನ್ನು ಆನೆ ತರದೆ ದಸರಾ ಉತ್ಸವ ಮಾಡುತ್ತಿರುವುದಕ್ಕೆ ಶಾಸಕರ ಮೇಲೂ ಸಹಜನರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಸರ್ಕಾರದ ಅನುಮತಿಯನ್ನು ಪಡೆದು ಹಿಂದಿನಂತೆ ಜಂಬೂಸವಾರಿ ನಡೆಸಲು ಜನರು ಒತ್ತಾಯಿಸುತ್ತಿದ್ದಾರೆ
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments