ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಜನಸಾಗರ..

Cnewstv / 27.02.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಜನಸಾಗರ..

ಶಿವಮೊಗ್ಗ : ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮಕ್ಕೆ ಇಂದು ಜನ ಸಾಗರವೇ ಸೇರಿತ್ತು.

ವಿಮಾನ ನಿಲ್ದಾಣದ ಆಭರಣದ ಒಳಗೆ ಬೆಳಗ್ಗೆ 8 ಗಂಟೆಯಿಂದಲೇ ಜನರು ಸೇರಲು ಆರಂಭಿಸಿದ್ದರು. 10 ಗಂಟೆಯೊಳಗಾಗಿ ಇಡೀ ಆವರಣವೇ ಜನರಿಂದ ತುಂಬಿ ಹೋಗಿತ್ತು.

ಪಾರ್ಕಿಂಗ್ ಸ್ಥಳದಿಂದ ವೇದಿಕೆಯ ಬಳಿಗೆ ತಮ್ಮ ನೆಚ್ಚಿನ ನಾಯಕರನ್ನು ಹತ್ತಿರದಿಂದ ನೋಡಬೇಕು ಎಂದು ಸ್ಥಳವನ್ನು ಕಾಯ್ದಿರಿಸಲು ಜನರು ಅವಸರದಿಂದ ಹೋಗುತ್ತಿದ್ದ ದೃಶ್ಯಗಳು ಸರ್ವೇಸಾಮಾನ್ಯವಾಗಿತ್ತು. ರಸ್ತೆಯ ಅಕ್ಕ ಪಕ್ಕ ವಿಮಾನನಿಲ್ದಾಣ ಉದ್ಘಾಟನೆ ಲೆಕ್ಸ್ ಗಳು, ಬಿಜೆಪಿ ಬಾವುಟಗಳು ರಾರಾಜಿಸುತ್ತಿದ್ದರು. ಮೋದಿ ಹಾಗೂ ಬಿ‌ ಎಸ್ ಯಡಿಯೂರಪ್ಪನವರ ಪರವಾಗಿ ಜೈಕಾರಗಳನ್ನು ಹಾಕುತ್ತಿದ್ದರು. 

 

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*