” ಸಾಕಪ್ಪಾ ಸಾಕು ” : ಬಿಜೆಪಿಯೇ ಭರವಸೆ ಪೋಸ್ಟರ್‌ಗಳ ಮೇಲೆ, ಕಾಂಗ್ರೆಸ್ ಕಾರ್ಯಕರ್ತರ ಪೋಸ್ಟರ್‌..

Cnewstv / 25.02.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

” ಸಾಕಪ್ಪಾ ಸಾಕು ” : ಬಿಜೆಪಿಯೇ ಭರವಸೆ ಪೋಸ್ಟರ್‌ಗಳ ಮೇಲೆ, ಕಾಂಗ್ರೆಸ್ ಕಾರ್ಯಕರ್ತರ ಪೋಸ್ಟರ್‌..

ಶಿವಮೊಗ್ಗ : ಬಿಜೆಪಿ ಸಹವಾಸ ಸಾಕಪ್ಪಾ ಸಾಕು, ಗೋ ಬ್ಯಾಕ್ ಬಿಜೆಪಿ ಎಂಬ ಘೋಷಣೆಗಳೊಂದಿಗೆ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಇಂದು ಮೆಗ್ಗಾನ್ ಆಸ್ಪತ್ರೆ ಎದುರಿನ ಪೊಲೀಸ್ ಕ್ಯಾಂಟೀನ್ ಬಳಿ ಪೋಸ್ಟರ್ ಅಭಿಯಾನದ ಮೂಲಕ ಪ್ರತಿಭಟನೆ ನಡೆಸಿದರು.

ಇದನ್ನು ಒದಿ : https://cnewstv.in/?p=12229

ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಜನಜೀವನವೇ ಅಸ್ತವ್ಯಸ್ತಗೊಂಡಿದೆ. ಆನರ ಕಿವಿಗೆ ಹೂವು ಮುಡಿಸುವ ಕೆಲಸದಲ್ಲಿ ಬಿಜೆಪಿ ತೊಡಗಿದೆ. ಭ್ರಷ್ಟಾಚಾರದ ಸರ್ಕಾರವಿದು. ಇವರ ಸಾಧನೆಯೆಂದರೆ ಶೇ.40ರಷ್ಟು ಕಮಿಷನ್ ಪಡೆಯುವುದು. ಜನರು ಬೇಸತ್ತು ಹೋಗಿದ್ದಾರೆ. ಬಿಜೆಪಿ ಸರ್ಕಾರ ರಾಜ್ಯ ಮತ್ತು ರಾಷ್ಟದಿಂದ ತೊಲಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯೇ ಭರವಸೆ ಎಂದು ಪೋಸ್ಟರ್‌ಗಳ ಮೂಲಕ ಹೇಳಿದ್ದೇ ಇವರ ಸಾಧನೆ. ಜನರ ಜೀವನವನ್ನು ದುಸ್ತರಗೊಳಿಸಿದ್ದಾರೆ. ಬಿಜೆಪಿಯ ಸಹವಾಸ ಎಲ್ಲರಿಗೂ ಸಾಕಾಗಿದೆ. ಇವರು ಕಿವಿ ಮೇಲೆ ಹೂವು ಇಡುವುದನ್ನುಇನ್ನಾದರೂ ತಡಯಬೇಕಾಗಿದೆ. ಈಗ ಏನಿದ್ದರೂ ಕಾಂಗ್ರೆಸ್ಸೇ ಭರವಸೆಯ ಬೆಳಕಾಗಲಿದೆ ಎಂದು ಮುಖಂಡರು ತಿಳಿಸಿದರು. ಬಿಜೆಪಿಯೇ ಭರವಸೆ ಎಂಬ ಪೋಸ್ಟರ್‌ಗಳ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಕಿವಿಗೆ ಹೂವು ಇಡುವ ಪೋಸ್ಟರ್‌ಗಳನ್ನು ಅಂಟಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಕೆ.ಬಿ. ಪ್ರಸನ್ನಕುಮಾರ್, ಆರ್. ಪ್ರಸನ್ನಕುಮಾರ್, ಎನ್.ರಮೇಶ್, ಎಸ್.ಕೆ.ಮರಿಯಪ್ಪ, ಹೆಚ್.ಸಿ ಯೋಗೀಶ್, ಡಿ.ಕೃಷ್ಣಪ್ಪ, ಚಂದ್ರಶೇಖರ್, ಕಲೀಂ ಪಾಶಾ, ದೀಪಕ್ ಸಿಂಗ್, ಜಿ.ಡಿ. ಮಂಜುನಾಥ್, ಕಲಗೋಡು ರತ್ನಾಕರ್, ಇಕ್ಕೇರಿ ರಮೇಶ್, ವೈ.ಹೆಚ್. ನಾಗರಾಜ್, ಮಂಜುನಾಥ ಬಾಬು, ಸುವರ್ಣಾ ನಾಗರಾಜ್, ಸ್ಟೆಲ್ಲಾ ಮಾರ್ಟಿನ್ ಸೇರಿದಂತೆ ಹಲವರಿದ್ದರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*