ಇಂದಿನಿಂದ ಖಾಸಗಿ ಶಾಲೆಗಳಲ್ಲಿ ಈ ಕೊರೊನಾ ರೂಲ್ಸ್ ಖಂಡಿತವಾಗಿ ಪಾಲಿಸಬೇಕು..

Cnewstv / 24.12.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಇಂದಿನಿಂದ ಖಾಸಗಿ ಶಾಲೆಗಳಲ್ಲಿ ಈ ಕೊರೊನಾ ರೂಲ್ಸ್ ಖಂಡಿತವಾಗಿ ಪಾಲಿಸಬೇಕು..

ಬೆಂಗಳೂರು : ರೂಪ್ಸಾ ತನ್ನ ಅಧೀನದಲ್ಲಿ ಬರುವ ಕರ್ನಾಟಕದ ಖಾಸಗಿ ಶಾಲೆಗಳ ಜೊತೆ ಸಭೆ ಮಾಡಿದ್ದು, ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಖಾಸಗಿ ಶಾಲೆಗಳಲ್ಲಿ ಕೊರೊನಾ ‌ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕೆಂದು ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇಂದಿನಿಂದ ಈ ನಿಯಮ ಅನ್ವಯವಾಗಲಿದೆ.

ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಶಾಲೆಗಳಲ್ಲಿ ಕೊರೊನಾ ‌ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ಖಾಸಗಿ ಶಾಲೆಗಳಿಗೆ ಸೂಚಿಸಿದ್ದಾರೆ. ಅಲ್ಲದೇ ಪಬ್ಲಿಕ್ ಪರೀಕ್ಷೆ ಬಿಟ್ಟು ಉಳಿದ ತರಗತಿಗಳ ಪರೀಕ್ಷೆಯನ್ನ ಅವಧಿಗೂ ಮುಂಚೆಯೇ ನಡೆಸುವ ಬಗ್ಗೆ ಚರ್ಚೆ ನಡೆಸಿದರು.

ಖಾಸಗಿ ಶಾಲೆಗಳಿಗೆ ಮಾರ್ಗಸೂಚಿ..

* ಶಾಲೆಗೆ ಬರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.

* ನೆಗಡಿ, ಕೆಮ್ಮು, ಜ್ವರ ಲಕ್ಷಣಗಳು ಕಂಡು ಬಂದಲ್ಲಿ ಪೋಷಕರಿಗೆ ಶಿಕ್ಷಕರು ತಕ್ಷಣ ಮಾಹಿತಿ ಕೊಡಬೇಕು.

* ನೆಗಡಿ, ಕೆಮ್ಮು, ಜ್ವರ ಇರುವ ವಿದ್ಯಾರ್ಥಿಗಳಿಗೆ ರಜೆ ಕೊಡಬೇಕು

* ಶಾಲಾ ಆವರಣದಲ್ಲಿ ದಿನ ಬಿಟ್ಟು ದಿನ ಸ್ಯಾನಿಟೈಸ್ ಮಾಡಿಸಬೇಕು.

* ಶಿಕ್ಷಕರು, ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಬೂಸ್ಟರ್ ಡೋಸ್ ಲಸಿಕೆ ಹಾಕಿಸಿಕೊಳ್ಳಬೇಕು.

* ಪ್ರತಿನಿತ್ಯ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಟೆಪ್ರೆಂಚರ್ ಚೆಕ್ ಮಾಡಬೇಕು.

* ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳ ಗುಂಪು ಗೂಡುವುದನ್ನ ತಡೆಗಟ್ಟಬೇಕು.

* ಸಾಮಾಜಿಕ ಅಂತರ ಪಾಲನೆ ಮಾಡಬೇಕು.

* ಇತರೆ ವಿದ್ಯಾರ್ಥಿಗಳ ನೀರು, ಆಹಾರ ಶೇರ್ ಮಾಡದಂತೆ ನೋಡಿಕೊಳ್ಳಬೇಕು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*