ಜೆ.ಡಿ.ಎಸ್ ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆ ಕ್ಯಾಂಟೀನ್ ಇಂದು ಆರಂಭಗೊಂಡಿದೆ, ಅಭ್ಯರ್ಥಿ ಮಧು ಬಂಗಾರಪ್ಪ ಪರ ಪ್ರಚಾರಕ್ಕಾಗಿ ಮಾಜಿ ಪ್ರಧಾನಿ ದೇವೇಗೌಡರು ಶಿವಮೊಗ್ಗಗೆ ಆಗಮಿಸಿದ್ದರು. ಅವರು ಮಾತನಾಡುತ್ತಿದ್ದಾಗ ಹಾಸನ, ಮಂಡ್ಯದಲ್ಲಿ ಮೊಮ್ಮಕ್ಕಳು ಗೆಲುವು ಪ್ರಚಾರ ಮಾಡಲು ಮಧು ಬಂಗಾರಪ್ಪ ಪರ ಪ್ರಚಾರದಲ್ಲಿ ಶಿವಮೊಗ್ಗ. ಮತ್ತು ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ನಾಯಕರು ಸಹ ಪ್ರಚಾರದಲ್ಲಿ ಮಧುರ ಪ್ರಚಾರದಲ್ಲಿದ್ದಾರೆ. ಮತ್ತು ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡ ನಂತರ ಸೀಟ್ ಹಂಚಿಕೆ ವಿಚಾರದ ಗೊಂದಲಗಳು ಇರೋಡು ಮಾದ್ಯಮಗಳಲ್ಲಿ ಹೊರತುಪಡಿಸಿ ನಮ್ಮ ನಡುವೆ ಇಲ್ಲವೇ ಉತ್ತರ ನೀಡಿದರು …
Read More »Tag Archives: Shimoga
ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಿನಿಂದ ಜಾರಿ – ಕೆ ಎ ದಯಾನಂದ
ಲೋಕಸಭೆ ಚುನಾವಣೆ ಅಧಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಇಂದಿನಿಂದಲೇ ಜಾರಿಯಾಗಿದ್ದು, ನೀತಿ ಸಂಹಿತೆ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ಎಚ್ಚರಿಕೆ ನೀಡಿದ್ದಾರೆ. ರಾಜಕೀಯ ಪಕ್ಷದವರಿಗೆ ಖಡಕ್ ವಾರ್ನಿಂಗ್ *ನೀತಿ ಸಂಹಿತೆ ಅನ್ವಯ ಹೊಸದಾಗಿ ಯಾವುದೇ ಕಾಮಗಾರಿಗಳ ಉದ್ಘಾಟನೆ ಅಥವಾ ಶಂಕುಸ್ಥಾಪನೆ ಮಾಡುವಂತಿಲ್ಲ. *ಯಾವುದೇ ಯೋಜನೆಗಳ ಫಲಾನುಭವಿಗಳ ಆಯ್ಕೆ ಅಥವಾ ಸೌಲಭ್ಯಗಳ ವಿತರಣೆ ಮಾಡುವಂತಿಲ್ಲ. *ಎಲ್ಲಾ ರಾಜಕೀಯ ಜಾಹೀರಾತು ಫಲಕಗಳನ್ನು 24ಗಂಟೆಗಳ ಒಳಗಾಗಿ ತೆರವುಗೊಳಿಸಬೇಕು. * ನೀತಿ ಸಂಹಿತೆಯನ್ನು ಉಲ್ಲಂಘಿಸುವ ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಸಹ ...
Read More »ನ್ಯಾಯಾಧೀಶರ ಕಾರನ್ನೇ ಲಾಕ್ ಮಾಡಿದ ಶಿವಮೊಗ್ಗ ಸಂಚಾರ ಪೊಲೀಸರು
ನೋಪಾರ್ಕಿಂಗ್ ನಲ್ಲಿ ನಿಂತಿದ್ದ ಜಿಲ್ಲಾ ಪ್ರಧಾನ ನ್ಯಾಯಾಧೀಶರ ಕಾರಿನ ಟೈರ್ ಗೆ ಸಂಚಾರ ಪೊಲೀಸರು ಲಾಕ್ ಮಾಡಿದ್ದಾರೆ. ಶಿವಮೊಗ್ಗದ ಗೋಪಿ ವೃತ್ತದ ಸಾಗರ್ ಹ್ಯಾಂಡಿಕ್ರಾಪ್ಟ್ ಎದುರಿನ ನೋ ಪಾರ್ಕಿಂಗ್ ಜಾಗದಲ್ಲಿ ನ್ಯಾಯಾಧೀಶರ ಕಾರನ್ನು ನಿಲ್ಲಿಸಲಾಗಿತ್ತು. ಜನಸಂದಣಿ ಇರುವ ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ನ್ಯಾಯಾಧೀಶರ ಕಾರನ್ನು ಲಾಕ್ ಮಾಡುವ ಮೂಲಕ ಸಂಚಾರ ಪೊಲೀಸರು ತಮ್ಮ ಕರ್ತವ್ಯ ಮೆರೆದಿದ್ದಾರೆ. ಸಂಚಾರ ಪೊಲೀಸರ ಕ್ರಮಕ್ಕೆ ಸಾರ್ವಜನಿಕ ವಲಯದಿಂದ ಪ್ರಶಂಸೆ ವ್ಯಕ್ತವಾಗಿದೆ.
Read More »ಆಡಿಯೋ ಹಗರಣ ಕುರಿತು ತನಿಖೆ ನಡೆಸಬೇಕು- ಯುವ ಕಾಂಗ್ರೆಸ್
ಯಡಿಯೂಪ್ಪ ಅವರ ಆಡಿಯೋ ಟೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿಯಿಂದ ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಯಿತು. ವಿಧಾನಸಭಾಧ್ಯಕ್ಷರನ್ನೇ ಬುಕ್ ಮಾಡಿದ್ದೇವೆ ಎಂದು ಬಿಜೆಪಿ ನಾಯಕರು ಹೇಳಿರುವುದು ಆಡಿಯೋದಲ್ಲಿ ದಾಖಲಾಗಿದೆ. ಶಾಸಕರಿಗೆ ಹತ್ತು ಕೋಟಿ ರೂಪಾಯಿ ಆಮಿಷ ಒಡ್ಡುತ್ತಿರುವ ಆಡಿಯೋ ಮತ್ತು ನ್ಯಾಯಾಧೀಶರನ್ನೇ ಬುಕ್ ಮಾಡಿದ್ದೇವೆ ಎನ್ನುವ ಮೂಲಕ ನ್ಯಾಯಾಂಗ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಬಿಜೆಪಿ ಹೊರಟಿದೆ. ಕಳೆದ ಆರು ತಿಂಗಳಿನಿಂದ ರಾಜ್ಯ ಸರ್ಕಾರವನ್ನು ಬೀಳಿಸಲು ಯಡಿಯೂರಪ್ಪ ಹಾಗೂ ಬಿಜೆಪಿ ಮುಖಂಡರು ವಾಮಮಾರ್ಗದಲ್ಲಿ ...
Read More »ಮಂಗನ ಕಾಯಿಲೆಗೆ ಮತ್ತೊಂದು ಬಲಿ.
ಮಂಗನ ಕಾಯಿಲೆ ಯಿಂದ ತತ್ತರಿಸಿದ ಸಾಗರದ ಅರಳಗೋಡು ಗ್ರಾಮಪಂಚಾಯಿತಿ ವ್ಯಾಪ್ತಿಯ ವಾಟಮಕ್ಕಿ ಗ್ರಾಮದಲ್ಲಿ ಕೃಷ್ಣಪ್ಪ ಎಂಬ 50 ವರ್ಷದ ವ್ಯಕ್ತಿ ಮೃತಪಟ್ಟಿದ್ದಾನೆ. ಕಳೆದ ನಾಲ್ಕು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಕೃಷ್ಣಪ್ಪ, ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಬರುವ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ.
Read More »ಮಂಗನ ಕಾಯಿಲೆ ನಿಯಂತ್ರಣಕ್ಕೆ ಹೊಸ ಜೆಲ್ ಆವಿಷ್ಕಾರ…
ಮಲೆನಾಡಿನ ಜನರ ನಿದ್ದೆಗೆಡಿಸಿದ್ದ ಮಂಗನ ಕಾಯಿಲೆಗೆ DMP ಆಯಿಲ್ ಬದಲಾಗಿ, ಆಯುರ್ವೇದಿಕ್ ಜೆಲ್ ನ ಶಿವಮೊಗ್ಗದ ನಿವೇದನ್ ನಿಂಪೆ ಆವಿಷ್ಕರಿಸಿದ್ದಾರೆ..
Read More »ಮಲೆನಾಡಿನಲ್ಲಿ ಕಂಪಿಸಿದ ಭೂಮಿ.
ಸದಾ ಹಚ್ಚ ಹಸಿರಿನ ನಡುವೆ ನೆಮ್ಮದಿಯಾಗಿ ಇರುತ್ತಿದ್ದ ಸಹ್ಯಾದ್ರಿ ಪರ್ವತದ ಜನರರು ಇಂದು ಭೂಮಿ ಕಂಪಿಸಿದ್ದರಿಂದ ಭಯಬೀತ ಗೊಂಡಿದ್ದರು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ , ಆಗುಂಬೆ ಸುತ್ತಮುತ್ತಲು ಗ್ರಾಮಗಳಾದ ಮೇಗರವಳ್ಳಿ, ಹನಸ, ಕರುಣಾಪುರ, ಗಾಡ್ರಗದ್ದೆ, ಶುಂಠಿ ಹಲ್ಲು, ಯಡೂರು, ಹೊಸನಗರ ಭಾಗದ ವರಾಹಿ ಯೋಜನಾ ಪ್ರದೇಶ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಮಧ್ಯರಾತ್ರಿ ಒಂದುವರೆ ಗಂಟೆ ಸಮಯದಲ್ಲಿ ಮನೆಯ ಪಾತ್ರೆ ಪಗಡಗಳೆಲ್ಲಾ ಅಲ್ಲಾಡಿದ ಅನುಭವವಾಗಿದ್ದು, ಭಾರಿ ಶಬ್ದ ಸಹಿತ, 30 ಸೆಕೆಂಡ್ ಗಳ ಕಾಲ ಭೂಮಿ ಕಂಪಿಸಿದೆ. ಭಯಭೀತರಾಗಿ ಜನರು ಮನೆಯಿಂದ ...
Read More »ಶಿವಮೊಗ್ಗ ನಗರದ ವಿವಿಧ ಕಡೆ ಯಲ್ಲಿ ನಡೆದ ತ್ರಿವಿಧ ಶ್ರೀ ಗಳ 11 ದಿನದ ಪುಣ್ಯಸ್ಮರಣೆ ಕಾರ್ಯಕ್ರಮಗಳು
ಲಿಂಗೈಕ್ಯರಾದ ಸಿದ್ಧಗಂಗಾ ಮಠದ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ 11 ನೇ ಪುಣ್ಯ ಸ್ಮರಣೆ ಪ್ರಯುಕ್ತ ಭಕ್ತರು ಹಲವು ಕಡೆ ಅನ್ನದಾಸೋಹವನ್ನು ನಡೆಸಿದರು. ನಗರದ ಪೊಲೀಸ್ ಚೌಕಿ ವೃತ್ತದಲ್ಲಿ ನಡೆದ ಪುಣ್ಯಸ್ಮರಣೆ ಕಾರ್ಯಕ್ರಮ ದ ಚಿತ್ರಣ ದುರ್ಗಿಗುಡಿ ಕನ್ನಡ ಸಂಘದಿಂದ ಸಿದ್ಧಗಂಗಾ ಮಠದ ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮ ಚಿತ್ರಣ ಗಾಡಿಕೊಪ್ಪ ದಲ್ಲಿ ನಡೆದ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ಪುಣ್ಯಸ್ಮರಣೆಯ ಕಾರ್ಯಕ್ರಮ
Read More »
C News TV Kannada News Online in cnewstv