Cnewstv.in / 16.03.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಶಿವಮೊಗ್ಗ – ಭದ್ರಾವತಿ ಪರ್ಯಾಯ ಮಾರ್ಗ ಸಂಚಾರ.
ಶಿವಮೊಗ್ಗ : ಶಿವಮೊಗ್ಗ-ಭದ್ರಾವತಿ ಮಧ್ಯೆ ಬರುವ ರೈಲ್ವೆ ಕ್ರಾಸಿಂಗ್ ಗೇಟ್ ನಂ.34 ರಲ್ಲಿ ರೈಲ್ವೆ ಓವರ್‍ಬ್ರಿಡ್ಜ್(ಆರ್‍ಓಬಿ) ಕಾಮಗಾರಿ ತ್ವರಿತಗತಿಯಿಂದ ಪೂರ್ಣಗೊಳ್ಳಬೇಕಾಗಿರುವುದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯುಂಟಾಗದಂತೆ ಕಾಮಗಾರಿ ಪೂರ್ಣಗೊಳ್ಳುವವರೆಗೆ ಕೆಳಕಂಡಂತೆ ಪರ್ಯಾಯ ಮಾರ್ಗಗಳಲ್ಲಿ ವಾಹನಗಳು ಸಂಚರಿಸಲು ಅವಕಾಶ ಕಲ್ಪಿಸಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಆದೇಶಿಸಿದ್ದಾರೆ.
ಶಿವಮೊಗ್ಗದಿಂದ ಭದ್ರಾವತಿ ಕಡೆಗೆ ಸಂಚರಿಸುವ ಮಿನಿ ನಗರ ಸಾರಿಗೆ ಬಸ್‍ಗಳು, ಕಾರು, ಟ್ಯಾಕ್ಸಿ ಮತ್ತು ಲಘು ವಾಹನಗಳು ಕಡದಕಟ್ಟೆ ವಿದ್ಯಾಧಿರಾಜ ಸಭಾಭವನ ಪಕ್ಕದ ರಸ್ತೆಯಿಂದ ಹೆಬ್ಬಂಡಿ ಮಾರ್ಗವಾಗಿ ಲಕ್ಷ್ಮಿಪುರ ಹಾಗೂ ಬಿಳಕಿ ಕ್ರಾಸ್ ಮೂಲಕ ಸಂಚರಿಸುವುದು. ಹಾಗೂ ಎಲ್ಲಾ ರೀತಿಯ ಭಾರೀ ವಾಹನಗಳು ಉಂಬ್ಳೆಬೈಲ್ ರಸ್ತೆ ಮೂಲಕ-ಕೃಷ್ಣಪ್ಪ ವೃತ್ತ-ಸಿದ್ದಾಪುರ ಸರ್ಕಲ್-ಬಿಳಕಿ ಕ್ರಾಸ್ ಮುಖಾಂತರ ಸಂಚರಿಸುವುದು.
ಇದನ್ನು ಒದಿ : https://cnewstv.in/?p=9042
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments