Cnewstv.in / 02.02.2022 / ಶಿವಮೊಗ್ಗ/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಮನೆಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ 82 ಕ್ವಿಂಟಾಲ್ ಪಡಿತರ ಅಕ್ಕಿ ಪತ್ತೆ.
ಶಿವಮೊಗ್ಗ : ತಾಲ್ಲೂಕಿನ ತರಗನಹಳ್ಳಿ ಗ್ರಾಮದ ಮಂಜುನಾಥ ಎಂಬುವರ ಮನೆಯಲ್ಲಿ ಕಾಳ ಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಸರ್ಕಾರಕ್ಕೆ ಸೇರಿದ ಅಕ್ಕಿಯನ್ನು ದಾಸ್ತಾನು ಮಾಡಲಾಗಿದ್ದು, ಪೋಲೀಸರು ಅದನ್ನು ವಶಪಡಿಸಿಕೊಂಡಿದ್ದಾರೆ.
ಸರ್ಕಾರಕ್ಕೆ ಸೇರಿದ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪಿ.ಎಸ್ ಐ ಹೊಳೆಹೊನ್ನೂರು ಹಾಗೂ ಸಿಬ್ಬಂದಿಗಳೊಂದಿಗೆ ತರಗನಹಳ್ಳಿ ಸದರಿ ಮನೆಯ ಹತ್ತಿರ ಹೋಗಿ ಪರಿಶೀಲಿಸಿದಾಗ ಬಿಳಿ ಪ್ಲಾಸ್ಟಿಕ್ ಚೀಲದಲ್ಲಿ ಅಕ್ಕಿ ತುಂಬಿರುವುದು ಕಂಡುಬಂದಿರುತ್ತದೆ.
ಅಕ್ಕ ಪಕ್ಕದ ಜನರನ್ನು ವಿಚಾರ ಮಾಡಿದಾಗ ಜಾವಳ್ಳಿ ಮೋಹನ್ ಎಂಬುವರು ಅಕ್ಕಿಯನ್ನು ಬೇರೆಕಡೆಯಿಂದ ತಂದು ಸಂಗ್ರಹ ಮಾಡಿರುತ್ತಾರೆ. ಮನೆಯ ಮಾಲಿಕರಾದ ಮಂಜಮ್ಮ ಇವರು 2 ವರ್ಷದಿಂದ ಬೇರೆ ಕಡೆ ವಾಸವಾಗಿರುತ್ತಾರೆ.
ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ತಂದು ತೂಕ ಮಾಡಿದಾಗ 40 ಕೆ.ಜಿ ಅಕ್ಕಿ ತುಂಬಿದ 205 ಚೀಲಗಳಿದ್ದು ಒಟ್ಟು 82 ಕ್ವಿಂಟಾಲ್ ಆಗಿದ್ದು ಇದರ ಒಟ್ಟು ಮೌಲ್ಯ 1,88,600/- ರೂ ಆಗಿದ್ದು ವಶಪಡಿಸಿಕೊಂಡು ಆರೋಪಿ ಜಾವಳ್ಳಿ ಮೋಹನ್ ಮೇಲೆ ಅಪರಾದ ಸಂಖ್ಯೆ 0038/2022 ಕಲಂ 3 ಮತ್ತು 7 ಇ.ಸಿ. ಕಾಯ್ದೆಅಡಿಯಲ್ಲಿಪ್ರಕರಣ ದಾಖಲಿಸಿದೆ
ಇದನ್ನು ಒದಿ : https://cnewstv.in/?p=8116
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments