Cnewstv.in / 09.01.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ತುಂಗಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಮೀನುಗಾರನಿಗೆ ಮೀನಿನ ಬದಲಾಗಿ ಸಿಕ್ತು ಮೊಸಳೆಯ ಮರಿ.
ಶಿವಮೊಗ್ಗ : ಮೀನುಗಾರ ಮೀನು ಹಿಡಿಯಲು ಹಾಕಿದ್ದ ಬಲೆಯಲ್ಲಿ ಮೀನಿನ ಬದಲಾಗಿ ಮೊಸಳೆ ಮರಿ ಸಿಕ್ಕ ಘಟನೆ ಶಿವಮೊಗ್ಗ ಜಿಲ್ಲೆಯ ಪಿಳ್ಳಂಗಿರಿಯಲ್ಲಿ ನಡೆದಿದೆ.
ಪಿಳ್ಳಂಗಿರಿ ಗ್ರಾಮದ ರಶೀದ್ ಎಂಬುವರು ಮೀನ ಹಿಡಿಯಲು ಊರಿನ ದೇವಾಲಯ ಪಕ್ಕದಲ್ಲಿ ಹರಿಯುವ ತುಂಗಾ ನದಿಯಲ್ಲಿ ಹಾಕಿದ್ದರು. ಗಾಳ ಜಗ್ಗಿ ದಂತಾಗಿದೆ ಕೂಡಲೇ ರಶೀದ್ ರವರು ಗಾಳವನ್ನು ಮೇಲೆತ್ತಿದಾಗ ಮೀನಿನ ಬದಲಾಗಿ ಮೊಸಲೆಯ ಮರಿ ಸಿಕ್ಕಿಬಿದ್ದಿದ್ದು ಕಂಡುಬಂದಿದೆ. ಕೂಡಲೇ ಊರಿನವರಿಗೆ ವಿಚಾರವನ್ನು ತಿಳಿಸಿದ್ದಾರೆ.
ಈಗಾಗಲೇ ಭದ್ರಾ ನದಿಯಲ್ಲಿ ಹಾಗೂ ತುಂಗಭದ್ರಾ ನದಿಯ ಸಂಗಮ ಸ್ಥಳವಾದ ಕೂಡ್ಲಿಯಲ್ಲಿ ಮೊಸಳೆಗಳು ಕಾಣಿಸಿಕೊಂಡಿದೆ ಎಂದು ಸುದ್ದಿಯಾಗಿತ್ತು. ಇದೇ ಬೆನ್ನಲ್ಲೇ ಮೊಸಳೆ ಮರಿ ಸಿಕ್ಕಿರುವುದು ಸಂತಾನೋತ್ಪತ್ತಿಯಾಗಿದೆ ಎಂದು ಉಳಿಸಲಾಗಿದೆ.
ದೇವಾಲಯದ ಹಿಂಭಾಗವಾಗಿರುವುದರಿಂದ ಇಲ್ಲಿ ಅನೇಕ ಭಕ್ತರು ಹಾಗೂ ಗ್ರಾಮಸ್ಥರು ನೀರಿಗಾಗಿ ನದಿಗೆ ಇಳಿಯುತ್ತಾರೆ. ಜಾನುವಾರುಗಳು ಸಹ ನೀರು ಕುಡಿಯಲು ನದಿಗೆ ಬರುತ್ತದೆ. ಹಾಗಾಗಿ ಈ ಭಾಗದ ಜನರಲ್ಲಿ ಮತ್ತಷ್ಟು ಆತಂಕವನ್ನು ಹೆಚ್ಚು ಮಾಡಿದೆ.
ಇದನ್ನು ಒದಿ : https://cnewstv.in/?p=7449
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments