Cnewstv / 30.06.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಸಂಕಷ್ಟದಲ್ಲಿ ಸಿಎನ್‌ಜಿ ಆಟೋ ಚಾಲಕರು..
ಶಿವಮೊಗ್ಗ : ಪ್ರಯಾಣಿಕರನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸುರಕ್ಷಿತವಾಗಿ ತಲುಪಿಸುವ ಆಟೋ ಚಾಲಕರೆ, ಇದೀಗ ಶಿವಮೊಗ್ಗ ನಗರದಲ್ಲಿ ಸಂಕಷ್ಟಕ್ಕೆ ಸುಲುಕಿದ್ದಾರೆ.
ಸಿ ಎಸ್ ಜಿ ಆಟೋಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇದೆ. ಅಲ್ಲದೆ ಹೆಚ್ಚು ಮೈಲೇಜ್ ಕೊಡುತ್ತದೆ. ಆದಾಯವನ್ನು ಹೆಚ್ಚಾಗಿ ಗಳಿಸಬಹುದು, ಕುಟುಂಬಕ್ಕೆ ಇದರಿಂದ ಹೆಚ್ಚು ನೆರವಾಗುತ್ತದೆ ಎಂಬ ಆಸೆಯಿಂದ ಸಿಎನ್ ಜಿ ಆಟೋವನ್ನು ಖರೀದಿಸಿದಂತಹ ಆಟೋ ಚಾಲಕರು, ಈಗ ಕುಟುಂಬವನ್ನು ನಡೆಸುವುದು ಹೇಗೆ ಎಂದು ತಲೆ ಮೇಲೆ ಕೈ ಹೊತ್ತಿ ಕುಳಿತಿದ್ದಾರೆ.
ಹೌದು, ಅಷ್ಟಕ್ಕೂ ಅವರಿಗೆ ಸಂಕಷ್ಟಕ್ಕೆ ಕಾರಣವಾಗಿರುವುದೇ ಪರವಾನಗಿ.. ಶೋರೂಮಿನಿಂದ ಆಟೋವನ್ನು ಖರೀದಿಸಿದ ನಂತರ ಪರವಾನಗಿ ನೀಡುತ್ತಿಲ್ಲ. ಪರವಾನಗಿ ಇಲ್ಲದ ಗಾಡಿಗಳು ರಸ್ತೆಗೆ ಬಂದರೆ ಪೊಲೀಸರು ಹಿಡಿಯುತ್ತಾರೆ. ಶಿವಮೊಗ್ಗ ನಗರದಲ್ಲಿ ಮಾತ್ರ ಈ ಸಿಎನ್‌ಜಿ ಆಟೋ ಪರವಾನಗಿ ಸಮಸ್ಯೆ ಎದುರಾಗಿದೆ. ಬೇರೆ ಎಲ್ಲೂ ಯಾವುದೇ ತೊಂದರೆ ಇಲ್ಲ.
ಯಾವುದೇ ಮಾಹಿತಿ ಇಲ್ಲದೆ, ಆರ್ ಟಿ ಓ ದಲ್ಲಿ ಈಗಾಗಲೇ ಸಾವಿರಕ್ಕೂ ಹೆಚ್ಚು ಆಟೋಗಳನ್ನು ರಿಜಿಸ್ಟರ್ ಮಾಡಿದ್ದಾರೆ. 40 ರಿಂದ 50 ಸಾವಿರ ಕೊಟ್ಟರೆ ಪರವಾನಗಿ ಕೊಡುತ್ತೇವೆ ಎಂದು ಡಿಮ್ಯಾಂಡ್ ಮಾಡುತ್ತಿದ್ದಾರೆ ಎನ್ನುವುದು ಆಟೋ ಚಾಲಕರ ಆರೋಪ.
“ಆರ್ ಟಿ ಓ ಹಾಗೂ ಶೋರೂಮ್ ನವರ ನಡುವೆ ಸಿಕ್ಕಿಹಾಕಿಕೊಂಡಿದ್ದೇವೆ. ಓಪನ್ ಪರ್ಮಿಟ್ ಕೊಡಿ.. ಇಲ್ಲ ಅಂದರೆ ನಮ್ಮ ಹಣ ನಮಗೆ ಹಿಂತಿರುಗಿಸಿ. ನಾವು ಬೇರೆ ಏನಾದರೂ ಕೆಲಸ ಮಾಡಿಕೊಂಡು ಜೀವನ ಮಾಡುತ್ತೇವೆ.. ಹೀಗಾದರೆ ನಾವು ಜೀವನ ಮಾಡುವುದು ಹೇಗೆ? ನಮ್ಮ ಕುಟುಂಬವನ್ನು ನಿರ್ವಹಣೆ ಮಾಡುವುದು ಹೇಗೆ ?” ಎಂಬುದು ಆಟೋ ಚಾಲಕರ ಅಳಲು..
ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಎಲ್ಲಾ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.. ಆದಷ್ಟು ಬೇಗ ಸಿಎನ್‌ಜಿ ಆಟೋ ಚಾಲಕರ ಸಮಸ್ಯೆಗೆ ಪರಿಹಾರ ಸಿಗಲಿ ಎಂಬುದು ನಮ್ಮ ಆಶಯ..
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments