Cnewstv / 21.06.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಇಂದು ಶಿವಮೊಗ್ಗ ಅಟೋ ಚಾಲಕರ ದೇಶಭಕ್ತಿ, ಎಲ್ಲರು ನೋಡಲೇ ಬೇಕಾದ ಸ್ಟೋರಿ..
ಶಿವಮೊಗ್ಗ : ಇಂದು ಸಂಜೆ ಶಿವಮೊಗ್ಗ ರೈಲ್ವೆ ನಿಲ್ದಾಣದ ಮುಂಭಾಗ ರಾಷ್ಟ್ರಧ್ವಜ ಕೆಳಗೆ ಬೀಳುವ ಸಂದರ್ಭದಲ್ಲಿ ಸ್ಥಳೀಯ ಆಟೋ ಚಾಲಕರು ಅದನ್ನ ಎತ್ತಿ ಹಿಡಿದ ಘಟನೆ ನಡೆದಿದೆ.
ಹೌದು ಶಿವಮೊಗ್ಗ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಇರುವ ರಾಷ್ಟ್ರಧ್ವಜ ಕಂಬದ ಹುಕ್ಕ್ ಕಟ್ ಅಗಿ ಕೆಳಗೆ ಬಿದ್ದು ರಾಷ್ಟ್ರಧ್ವಜವು ನೆಲಕ್ಕೆ ತಾಗುವ ಸಂದರ್ಭದಲ್ಲಿ ಅದನ್ನು ಗಮನಿಸಿದ ಸ್ಥಳೀಯ ಆಟೋ ಚಾಲಕರು ರಾಷ್ಟ್ರಧ್ವಜವು ನೆಲಕ್ಕೆ ಬೀಳದಂತೆ ತಡೆದು ಅದನ್ನ ಸುರಕ್ಷಿತವಾಗಿ ತೆಗೆದುಕೊಂಡು ಹೋಗಿ ರೈಲ್ವೆ ಅಧಿಕಾರಿಗಳಿಗೆ ನೀಡಿದ್ದಾರೆ.
ರಾಷ್ಟ್ರಧ್ವಜದ ಕಂಬವು ಅತ್ಯಂತ ಕಳಪೆಯಾಗಿ ನಿರ್ಮಾಣ ಮಾಡಲಾಗಿದೆ ಇದಕ್ಕೆ ಕಾರಣ ಎಂದು ಸ್ಥಳೀಯರು ಆರೋಪ ವ್ಯಕ್ತಪಡಿಸಿದ್ದಾರೆ. ಹಾಗೂ ಆಟೋ ಚಾಲಕರ ಈ ಸಮಯಪ್ರಜ್ಞೆ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments