Cnewstv / 20.06.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಒಂದೇ ಗಂಟೆ ಮಳೆಗೆ ಉಕ್ಕಿ ಹರಿದ ರಾಜಕಾಲುವೆ, ಹೈರಾಣದ ಜನ..
ಶಿವಮೊಗ್ಗ : ನಗರದಲ್ಲಿ ಒಂದೇ ಗಂಟೆ ಸುರಿದ ಮಳೆಗೆ ಜನ ಹೈರಾಣಾಗಿದ್ದಾರೆ.
ಇಂದು ಮಧ್ಯಾಹ್ನ ನಗರಾದಲ್ಲಿ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಿದೆ. ಬಿಸಿಲಿನಿಂದ ಬಳಲುತ್ತಿದ್ದ ಜನರಿಗೆ ವರುಣ ತಂಪೆರೆದರೆ ಮತ್ತೊಂದೆಡೆ ತಗ್ಗು ಪ್ರದೇಶದ ಜನರು ಮಳೆಗೆ ಹೈರಾಣಾಗಿದ್ದಾರೆ.
ಭಾರಿ ಮಳೆಯಿಂದಾಗಿ ಹೊಸ ಮನೆಯ ರಾಜ ಕಾಲುವೆ ಉಕ್ಕಿ ಹರಿದಿದ್ದು ರಸ್ತೆಯ ಮೇಲೆ ನೀರು ಹರಿದು ತಗ್ಗು ಪ್ರದೇಶದ 50 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಪ್ರತಿನಿತ್ಯದ ಅಗತ್ಯದ ವಸ್ತುಗಳು ಸೇರಿದಂತೆ ಮನೆಯ ಎಲ್ಲಾ ವಸ್ತುಗಳು ನೀರಿನಿಂದ ಹಾಳಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪಾಲಿಕೆ ಸದಸ್ಯೆ ರೇಖಾ ರಂಗನಾಥ್, ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ರಾಜಕಾರಣಿಯಲ್ಲಿ ಸುಗಮವಾಗಿ ನೀರು ಹೋಗುವಂತೆ ವ್ಯವಸ್ಥೆ ಮಾಡಿದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments