Cnewstv / 19.06.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಅನ್ನಭಾಗ್ಯ ಕಗ್ಗಂಟು : ಕೇಂದ್ರ ಸರ್ಕಾರ ಮಾನವೀಯತೆಯನ್ನೇ ಮರೆತಿದೆ – ಶಿಕ್ಷಣ ಸಚಿವ ಮಧು ಬಂಗಾರಪ್ಪ.
ಶಿವಮೊಗ್ಗ : ಕೇಂದ್ರ ಸರ್ಕಾರ ಮಾನವೀಯತೆಯನ್ನೇ ಮರೆತಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ರಾಜ್ಯ ಹಾಗೂ ಕೇಂದ್ರದ ನಡುವಿನ ಅಕ್ಕಿ ಸಂಘರ್ಷದ ವಿಚಾರ ಇನ್ನೂ ಮುಂದುವರೆದಿ. ಇಂದು ಶಿವಮೊಗ್ಗದಲ್ಲಿ ಈ ಬಗ್ಗೆ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕೇಂದ್ರ ಹಾಗೂ ರಾಜ್ಯದ ನಡುವೆ ಹೊಂದಾಣಿಕೆ ಇರಬೇಕು ಆದರೆ ಕೇಂದ್ರ ಸರ್ಕಾರ ಮಾನವೀಯತೆಯನ್ನೇ ಮರೆತಿದೆ ಎಂದರು.
ನಾವು ಕೇಳುತ್ತಿರೋದು ಹೊಟ್ಟೆಗೆ ಅನ್ನ ಹೊರತು, ಬೇರೆ ಏನು ಕೇಳುತ್ತಿಲ್ಲ. ನಾವು ಬೇರೆ ಏನು ಬುಸಿನೆಸ್ ಮಾಡುತ್ತಿಲ್ಲ. ಈಗ ನೋಡಿದ್ರೇ 15 kg ಕೊಡಿ ಅಂತಿದ್ದಾರೆ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ ಸೋತಾಗ ಸಹಜವಾಗಿ ಎಲ್ರೂ ಹೀಗೆ ಮಾಡ್ತೇರೆ ಅದನ್ನೇ ಬಿಜೆಪಿ ಕೂಡ ಮಾಡುತ್ತಿದೆ ಜನರು ಕೂಡ ಇದನ್ನು ಗಮನಿಸ್ತಾರೆ ಎಂದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments