Cnewstv / 18.06.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಕಾಂಗ್ರೆಸ್ ಸರ್ಕಾರಕ್ಕೆ ಹೊರರಾಜ್ಯದ ಮೇಲೆಯೇ ಹೆಚ್ಚು ಪ್ರೀತಿ..
ಶಿವಮೊಗ್ಗ : ಕಾಂಗ್ರೆಸ್ ಸರ್ಕಾರಕ್ಕೆ ಹೊರರಾಜ್ಯದ ಮೇಲೆಯೇ ಹೆಚ್ಚು ಪ್ರೀತಿ ಎಂದು ಶಾಸಕ ಬಿ ವೈ ವಿಜಯೇಂದ್ರ ಹೇಳಿದ್ದಾರೆ.
ಕಾಂಗ್ರೆಸ್ ಚುನಾವಣೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ 10 ಕೆಜಿ ಅಕ್ಕಿ ಕೊಡುವುದಾಗಿ ಭರವಸೆ ನೀಡಿತ್ತು. ಕೇಂದ್ರದ 5 ಕೆಜಿ ಅಕ್ಕಿ ಸೇರಿಸಿ 10 ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದಾರೆ. ಅದರ ಬದಲು ಕೇಂದ್ರದ 5 ಕೆಜಿ ಕಾಂಗ್ರೆಸ್ ಸರ್ಕಾರದ 10 ಕೆಜಿ ಸೇರಿಸಿ ಒಟ್ಟು 15 ಕೆಜಿ ಅಕ್ಕಿ ಕೊಡಿ ಎಂದರು.
ಕಾಂಗ್ರೆಸ್ ಸರ್ಕಾರಕ್ಕೆ ಹೊರ ರಾಜ್ಯದ ಮೇಲೆಯೇ ಹೆಚ್ಚು ಪ್ರೀತಿ. ಸ್ಥಳೀಯವಾಗಿ ರಾಗಿ ಗೋಧಿ ಸೇರಿದಂತೆ ಅಗತ್ಯ ವಸ್ತುಗಳನ್ನ ನಮ್ಮ ರೈತರಿಂದಲೇ ಖರೀದಿಸಬೇಕು. ಕಾಂಗ್ರೇಸ್ ಅಧಿಕಾರಕ್ಕೆ ಬಂದ 24 ಗಂಟೆಯೊಳಗಾಗಿ ಭರವಸೆ ಈಡೇರಿಸುವುದಾಗಿ ಹೇಳಿತ್ತು ಆದರೆ ಮತಾಂತರ ಪಠ್ಯ ರದ್ದು, ಮೊದಲಾದ ವಿಷಯಗಳನ್ನ ಪ್ರಸ್ತಾಪಿಸುವುದರ ಮೂಲಕ ಜನರ ಗಮನವನ್ನು ಬೇರೆ ಸೆಳೆಯುತ್ತಿದೆ ಎಂದರು
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments