Cnewstv / 18.06.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ ಎನ್ನುವುದಕ್ಕಿಂತ ಅವರ ಗ್ಯಾರೆಂಟಿ ಕಾರ್ಡ್ ಗೆದ್ದಿದೆ- ಆರಗ ಜ್ಞಾನೇಂದ್ರ
ತೀರ್ಥಹಳ್ಳಿ : ಚುನಾವಣೆಯಲ್ಲಿ ರಾಜ್ಯದ ಕಾಂಗ್ರೆಸ್ ಪಕ್ಷ ಜನರಿಗೆ ಕೊಟ್ಟಂತಹ ಆಶ್ವಾಸನೆಗಳನ್ನು ಗ್ಯಾರೆಂಟಿಗಳನ್ನ ಈಡೇರಿಸುವಲ್ಲಿ ವಿಫಲವಾಗಿದೆ. ಇದನ್ನ ಖಂಡಿಸಿ ತೀರ್ಥಹಳ್ಳಿಯ ಬಿಜೆಪಿ ಮಂಡಲದ ವತಿಯಿಂದ ಸೋಮವಾರ ಪ್ರತಿಭಟನೆ ಸಭೆ ಮತ್ತು ಮೆರವಣಿಗೆಯನ್ನು ಹಮ್ಮಿಕೊಂಡಿದ್ದೇವೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಶನಿವಾರ ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನೆಡೆಸಿ ಮಾತನಾಡಿದ ಅವರು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ ಎನ್ನುವುದಕ್ಕಿಂತ ಅವರ ಗ್ಯಾರೆಂಟಿ ಕಾರ್ಡ್ ಗೆದ್ದಿದೆ. ಅಮಾಯಕ ಜನರಿಗೆ ಆಮೀಷವನ್ನು ಒಡ್ಡಿ ಚುನಾವಣೆಯಲ್ಲಿ ಮತ ಗಳಿಕೆಯನ್ನು ಮಾಡಿ ಅಧಿಕಾರಕ್ಕೆ ಬಂದು ಒಂದು ತಿಂಗಳಿನ ನಂತರವೂ ಕೂಡ ಆಶ್ವಾಸನೆ ಈಡೇರಿಸಲು ವಿಫಲವಾಗಿದೆ ಎಂದರು.
ಮಹಿಳೆಯರಿಗೆ ಬಸ್ಸಿನಲ್ಲಿ ಫ್ರೀ ಓಡಾಡಲು ಅವಕಾಶವನ್ನು ಮಾಡಿಕೊಡುತ್ತೇವೆ ಎಂದು ಹೇಳಿದ್ದರು. ಆದರೆ ರಾಜ್ಯದ ಶೇಕಡ 50ರಷ್ಟು ಭಾಗದ ಮಂದಿ ಮಹಿಳೆಯರು ಈ ಯೋಜನೆಯಿಂದ ವಂಚಿತರಾಗಿದ್ದಾರೆ.
ಕೆಎಸ್ಆರ್ಟಿಸಿ ಬಸ್ ಇಲ್ಲದೆ ಇರುವಂತಹ ಮಲೆನಾಡಿನ ಹಲವು ತಾಲೂಕುಗಳಿವೆ. ಅಂತಹ ಜಾಗಕ್ಕೆ ಕೆಎಸ್ಆರ್ಟಿಸಿ ಬಸ್ಸನ್ನ ಬಿಡಬೇಕು ಅಥವಾ ಖಾಸಗಿ ಬಸ್ ಗಳಿಗೆ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಅಗ್ರಹಿಸಿದರು
ಚುನಾವಣೆಗೂ ಮೊದಲು ಪ್ರತಿ ಮನೆಗೂ 200 ಯೂನಿಟ್ ಅನ್ನು ಉಚಿತವಾಗಿ ಕೊಡುತ್ತೇವೆ ಎಂದು ಹೇಳಿ ಮಾರ್ಚ್ ನಿಂದ ಬಂದಿರುವ ಬಿಲ್ ಗಳಲ್ಲಿ ಅಧಿಕ ಮೊತ್ತದ ಬಿಲ್ ಬರುತ್ತಿದೆ. ಜನರು ಇದರಿಂದ ದಿಗ್ಬ್ರಮೆಗೊಂಡಿದ್ದಾರೆ. ಚುನಾವಣೆಗೂ ಮೊದಲು 2 ಯೂನಿಟ್ ಉಚಿತವಾಗಿ ಕೊಡುತ್ತೇವೆ ಎಂದು ಹೇಳಿ ಈಗ ಅದಕ್ಕೆ ಷರತ್ತುಗಳನ್ನು ವಿಧಿಸುತ್ತಿದ್ದಾರೆ. ಉಚಿತ ಕೊಡುವುದಾಗಿ ಹೇಳಿಕೊಂಡು ಈಗ ಜನರ ಜೇಬಿಗೆ ಕತ್ತರಿ ಹಾಕುವಂತಹ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಕೇಳಿದರೆ ಹಿಂದಿನ ಸರ್ಕಾರ ಮಾಡಿದ್ದು ಎಂದು ಹೇಳುತ್ತಾರೆ ಹಿಂದಿನ ಸರ್ಕಾರ ಯಾವುದೇ ಕಾರಣಕ್ಕೂ ಬಿದ್ದಿದ್ದರೆ ಏರಿಕೆ ಮಾಡಿರಲಿಲ್ಲ ಎಂದರು.
ಇನ್ನು ಪದವಿಧರರಿಗೆ ಏನು ಎಂದು ಅವರೇ ಡಿಸೈಡ್ ಮಾಡಲಿಲ್ಲ. ಪದವೀಧರರಿಗೆ ಮೂರು ಸಾವಿರ ಹಾಗೂ ಒಂದುವರೆ ಸಾವಿರ ಹಣ ಡಿಪ್ಲೋಮೋ ಮಾಡಿದವರಿಗೆ ಎಂದು ಹೇಳಿದ್ದರು. ಈಗ ನೋಡಿದರೆ 2022 23ನೇ ಇಸವಿಯವರಿಗೆ ಮಾತ್ರ, ಅವರು ಕೂಡ ಆರು ತಿಂಗಳ ಕಾಲ ಕಾಯಬೇಕು ಎಂದು ಹೇಳುತ್ತಿದ್ದಾರೆ. ಈ ರೀತಿ ಆಶ್ವಾಸನೆ ಕೊಡುವಾಗ ಯಾವುದೇ ರೀತಿಯ ನಿರ್ಬಂಧವನ್ನು ವಿಧಿಸಿರಲಿಲ್ಲ. ಹಾಗಾಗಿ ಕೊಟ್ಟಂತಹ ಆಶ್ವಾಸನೆಯನ್ನು ಈಡೇರಿಸಬೇಕು ಎಂದರು
ಬಿಪಿಎಲ್ ಕಾರ್ಡ್ ದಾರರಿಗೆ ಉಚಿತವಾಗಿ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದರು. ಈಗ ಕೇಂದ್ರ ಸರ್ಕಾರದ ಕಡೆ ಬೆರಳು ತೋರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಈಗಾಗಲೇ ಪ್ರತಿ ತಿಂಗಳು 5 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ. ಹಿಂದೆ ಕೊರೋನಾ ಸಂದರ್ಭದಲ್ಲಿ 10 ಕೆಜಿ ಅಕ್ಕಿಯನ್ನು ಕೊಡುತ್ತಿದ್ದರು ಈಗ ಅದನ್ನು ಐದು ಕೆಜಿ ಇಳಿಸಿದ್ದಾರೆ . ಕಾಂಗ್ರೆಸ್ ನವರು ಕೊಟ್ಟಂತಹ ಆಶ್ವಾಸನೆಯ ಅನುಸಾರವಾಗಿ ರಾಜ್ಯದ 10 ಕೆಜಿ ಹಾಗೂ ಕೇಂದ್ರ ಸರ್ಕಾರದ ಐದು ಕೆಜಿ ಸೇರಿ ಒಟ್ಟು 15 ಕೆಜಿ ಅಕ್ಕಿಯನ್ನು ಬಿಪಿಎಲ್ ಕಾರ್ಡುದಾರರಿಗೆ ಕೊಡಬೇಕು ಎಂದು ಆಗ್ರಹಿಸಿದರು
ಕುಟುಂಬದ ಮಹಿಳೆಯೊಬ್ಬಳಿಗೆ 2000 ಹಣ ನೀಡುವುದಾಗಿ ಕಾಂಗ್ರೆಸ್ ಸರ್ಕಾರ ಆಶ್ವಾಸನೆ ನೀಡಿತ್ತು. ಆದರೆ ಅದರ ಅರ್ಜಿ ಬಂದಿಲ್ಲ. ಕಥೆ ಹೇಳಿಕೊಂಡು ಮುಂದೂಡುತ್ತಿದ್ದಾರೆ. ಅಷ್ಟೇ ಅಲ್ಲದೆ ಮನೆ ಯಜಮಾನಿ ಯಾರು ಎಂದು ಕೂಡ ಡಿಸೈಡ್ ಮಾಡಲು ಆಗಿಲ್ಲ. ಒಟ್ಟಾರೆಯಾಗಿ ಇವರ ಕೊಟ್ಟಿರುವಂತಹ ಗ್ಯಾರಂಟಿಗಳನ್ನು ಕೊಡದೆ ಹೋಗುವ ಪರಿಸ್ಥಿತಿ ಕೂಡ ಬರಬಹುದು ಎಂದರು.
ಈ ಸಂದರ್ಭದಲ್ಲಿ ಬಾಳೆಬೈಲು ರಾಘವೇಂದ್ರ, ನಾಗರಾಜ್ ಶೆಟ್ಟಿ, ನವೀನ್ ಹೆದ್ದೂರು, ಆರ್ ಮದನ್, ಬೇಗುವಳ್ಳಿ ಕವಿರಾಜ್, ಅಶೋಕ್ ಮೂರ್ತಿ ಕುಕ್ಕೆ ಪ್ರಶಾಂತ್ ಸೇರಿ ಹಲವರು ಉಪಸ್ಥಿತರಿದ್ದರು
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments