Cnewstv / 17.06.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ತುಂಗಾ ನದಿ ತಟದಲ್ಲಿ ಎನ್ ಐ ಎ ತಂಡದಿಂದ ಸ್ಥಳ ಮಹಜರ್.
ಶಿವಮೊಗ್ಗ : ಶಿವಮೊಗ್ಗದಲ್ಲಿ ನಡೆದಿದ್ದ ಬಾಂಡ್ ಪ್ರಯೋಗಿಕ ಸ್ಪೋಟ ಹಾಗೂ ರಾಷ್ಟ್ರಧ್ವಜ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಎನ್ ಐ ಎ ತಂಡದವರು ತುಂಗಾ ನದಿಯ ತಟದಲ್ಲಿ ಸ್ಥಳ ಮಹಜರು ನಡೆಸಿದರು.
ಶಿವಮೊಗ್ಗದಲ್ಲಿ ನಡೆಸಿದ ಪ್ರಾಯೋಗಿಕ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ಎನ್ ಐ ಎ ತಂಡದವರು ಚುರುಕುಗೊಳಿಸಿದ್ದಾರೆ. ಇಂದು ಬೆಳಗ್ಗೆ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಶಾರಿಖ್ ನನ್ನು ಬಿಗಿ ಬಂದೋ ಬಸ್ತ್ ನೊಂದಿಗೆ ಕರೆತಂದು ಸ್ಥಳ ಮಹಜರು ನಡೆಸಿದರು. ಗುರುಪುರದ ತುಂಗಾ ನದಿ ತಟ ಸೇರಿದಂತೆ ಆರೋಪಿಯು ಎಲ್ಲೆಲ್ಲಿ ಸಂಚಾರ ಮಾಡಿದ ಅಲ್ಲೆಲ್ಲಾ ಸ್ಥಳ ಮಹಜರು ನಡೆಸಲಾಯಿತು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments