Cnewstv / 16.06.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಬಡವರ ಶಾಪ ನಿಮಗೆ ಕಟ್ಟೆ ತಟ್ಟುತ್ತದೆ – ಕೆ ಎಸ್ ಈಶ್ವರಪ್ಪ.
ಶಿವಮೊಗ್ಗ : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳೊಳಗೆ ನೇರವಾಗಿ ಇದು ಹಿಂದೂ ಧರ್ಮದ ವಿರೋಧಿ, ಬಡ ಜನರಿಗೆ ಮೋಸ ಮಾಡುವಂತಹ ಸರ್ಕಾರ ಎಂದು ಸ್ಪಷ್ಟವಾಗಿ ಗೋಚರವಾಗುತ್ತಿದೆ.
ಕೇಂದ್ರ ಸರ್ಕಾರಕ್ಕೆ ಏನು ಹೇಳದೆ, ಅವರನ್ನ ಕೇಳದೆ, ಬಡವರಿಗೆ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಗ್ಯಾರೆಂಟಿ ಘೋಷಣೆ ಮಾಡಿ, ಅವರಿಂದ ಮತವನ್ನು ಪಡೆದು ಅಧಿಕಾರಕ್ಕೆ ಬಂದು ಈಗ ನರೇಂದ್ರ ಮೋದಿಯವರು ಬಡವರಿಗೆ ಅಕ್ಕಿ ಕೊಡುತ್ತಿಲ್ಲ, ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಕೊಡುತ್ತಿಲ್ಲ ಎಂದು ಮೋಸ ಮಾಡುತ್ತಿದ್ದೀರಾ ಈ ಬಡವರ ಶಾಪ ನಿಮಗೆ ಕಟ್ಟೆ ತಟ್ಟುತ್ತದೆ.
ಬಡಜನರಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ ಕೊಡ್ತೇವೆ ಎಂದು ಹೇಳಿ, ಕೇಂದ್ರ ಸರ್ಕಾರ ಬಡ ಜನರಿಗೆ ನೀಡುತ್ತಿದ್ದ 5 ಕೆಜಿ ಅಕ್ಕಿ ಬಗ್ಗೆ ಸ್ಪಷ್ಟವಾಗಿ ಏನು ಹೇಳದೆ, ನರೇಂದ್ರ ಮೋದಿಯವರು ಬಡವರಿಗೆ 10 ಕೆಜಿ ಅಕ್ಕಿಯನ್ನು ಕೊಡುವುದಕ್ಕೆ ಅಡ್ಡ ಬರುತ್ತಿದ್ದಾರೆ ಎಂದು ಎಂಬ ಭಾವನೆಯನ್ನು ಬಿತ್ತುತ್ತಿದ್ದೀರಾ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments