Cnewstv / 15.06.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಶಾಸಕರಿಂದ ಶಾಂತಿ ಕದಡುವ ಯತ್ನ-ಸರ್ಕಾರಿ ಆಸ್ತಿ ನಾಶ.
ಶಿವಮೊಗ್ಗ : ಮೆಸ್ಕಾಂ ಕಚೇರಿಗೆ ಕಲ್ಲು ಹೊಡೆದ ವ್ಯಕ್ತಿಯನ್ನು ಬಂಧಿಸಲು ಐ ಏನ್ ಟಿ ಯು ಸಿ ಜಿಲ್ಲಾಧ್ಯಕ್ಷರಾದ ಬೊಮ್ಮನಕಟ್ಟೆ ವಿನಯ್ ಅವರ ನೇತೃತ್ವದಲ್ಲಿ ಎಸ್ಪಿ ಅವರಿಗೆ ದೂರು ನೀಡಲಾಯಿತು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದಿಕ್ಕುತೋಚದಂತಾಗಿರುವ ಬಿಜೆಪಿ ಕಾರ್ಯಕರ್ತರು ಸರ್ಕಾರದ ಆಸ್ತಿ ನಾಶಗೊಳಿಸುವ ಹೀನಕೃತ್ಯಕ್ಕೆ ಕೈ ಹಾಕಿರುವುದು ಶೋಭೆ ತರುವಂತದ್ದಲ್ಲ. ಸರ್ಕಾರದ ಆಸ್ತಿ ರಕ್ಷಿಸಬೇಕಾದ ಶಿವಮೊಗ್ಗ ನಗರದ ಶಾಸಕರೇ ತಮ್ಮ ಉದ್ವೇಗದ ಹೇಳಿಕೆಗಳಿಂದ ಕಾರ್ಯಕರ್ತರನ್ನು ಸರ್ಕಾರದ ಆಸ್ತಿ ನಾಶಕ್ಕೆ ಪ್ರಚೋಧಿಸಿದ್ದಾರೆ.
ಜನರ ತೆರಿಗೆಯ ಹಣದಿಂದ ಸರ್ಕಾರಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಸರ್ಕಾರಿ ಆಸ್ತಿ-ಪಾಸ್ತಿಗಳನ್ನು ಹಾಳು ಮಾಡುವುದು ಶಿಕ್ಷಾರ್ಹ ಅಪರಾಧ. ಹಾಗಾಗಿ ಪ್ರತಿಭಟನೆಯ ನೆಪದಲ್ಲಿ ಸರ್ಕಾರಿ ಆಸ್ತಿ ನಾಶ ಮಾಡಿರುವ ಪ್ರತಿಭಟನಕಾರರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಇನ್ನು ಪ್ರತಿಭಟನೆಯ ನೇತೃತ್ವ ವಹಿಸಿದ ನಗರ ಶಾಸಕರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕು.
ಶಿವಮೊಗ್ಗ ನಗರದ ಶಾಂತಿ ಕದಡುವವರ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಡಬೇಕು. ತಪ್ಪಿತಸ್ಥರು ಯಾರೇ ಆದರೂ ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಕಾಂಗ್ರೆಸ್ ಪಕ್ಷ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ದೂರು ನೀಡಲಾಯಿತು
ಈ ಸಂದರ್ಭದಲ್ಲಿ ಕೆಪಿಸಿಸಿ ಹಿಂದುಳಿದ ವರ್ಗದ ಪ್ರಧಾನ ಕಾರ್ಯದರ್ಶಿಗಳಾದ ವಿಶ್ವನಾಥ ಕಾಶಿ, NSUI ರಾಜ್ಯ ಕಾರ್ಯದರ್ಶಿಯಾದ ಬಾಲಾಜಿ, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಶಾಮಸುಂದರ್, ಜಗನ್ನಾಥ್, ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ವಿನಯ್, ಕಾರ್ಮಿಕ ಜಿಲ್ಲಾಧ್ಯಕ್ಷರಾದ ಮಧು ಕುಮಾರ್, ಗಿರೀಶ್, ವಾರ್ಡ್ ಅಧ್ಯಕ್ಷರುಗಳಾದ ಮಂಜು ಪುರುಲೆ, ನವೀನ್,ನಿಖಿಲ್, INTUC ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಹೇಮಂತ್, obc ನಗರಧ್ಯಕ್ಷರಾದ ಮೋಹನ್, ಯುವ ಕಾಂಗ್ರೆಸ್ ನ ಮುಖಂಡರಾದ ಸಂದೀಪ, ಭರತ್,ದರ್ಶನ್ ಹಾಗೂ ಇನ್ನು ಹಲವಾರು ಕಾರ್ಯಕರ್ತರುಗಳಿದ್ದರು
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments