Cnewstv / 14.06.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ವೈಯಕ್ತಿಕ ದ್ವೇಷದ ಹಿನ್ನೆಲೆ ಯುವಕನ ಬರ್ಬರ ಹತ್ಯೆ..
ಶಿವಮೊಗ್ಗ : ಬುಧುವಾರ ರಾತ್ರಿ 10.30 ರ ಸಮಯಕ್ಕೆ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಯುವಕನ ಬರ್ಬರ ಹತ್ಯೆ ಮಾಡಲಾಗಿದೆ.
ನಗರದ ಮಂಡ್ಲಿ ಬೈಪಾಸ್ ರಸ್ತೆಯಲ್ಲಿರುವ ಇಲಿಯಾಸ್ ನಗರದಲ್ಲಿ ನೆನ್ನೆ ರಾತ್ರಿ ಕೊಲೆ ನಡೆದಿದೆ. ಕೊಲೆಯಾದವನನ್ನು ಆಸೀಫ್ (25)ಎಂದು ಗುರುತಿಸಲಾಗಿದ್ದು, ಜಬೀ ಎಂಬ ಆತನ ಸ್ನೇಹಿತನೇ, ಆತನನ್ನ ಹತ್ಯೆ ಮಾಡಿದ್ದಾರೆ.
ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments