Cnewstv / 3.06.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಸರ್ಕಾರದಿಂದ ಗ್ಯಾರಂಟಿ ಘೋಷಣೆ ಹಿನ್ನೆಲೆ ಜಿಲ್ಲಾ ಎನ್ ಎಸ್ ಯು ಐ ನಿಂದ ಸಂಭ್ರಮಾಚರಣೆ..
ಶಿವಮೊಗ್ಗ : ಸರ್ಕಾರದಿಂದ ಗ್ಯಾರಂಟಿ ಘೋಷಣೆ ಹಿನ್ನೆಲೆ
ಶಿವಮೊಗ್ಗ ಜಿಲ್ಲಾ ಎನ್ ಎಸ್ ಯು ಐ ನಿಂದ
ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದರು.
ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದ ಮುಂಭಾಗ NSUI ಕಾರ್ಯಕರ್ತರು ಹಾಗೂ ಕಾಂಗ್ರೇಸ್ ಮುಖಂಡರು ಸಂಭ್ರಮಾಚರಣೆ ನಡೆಸಿದರು. ಸಿದ್ದರಾಮಯ್ಯ ಸರ್ಕಾರ ಹೇಳಿದಂತೆ ಎಲ್ಲ ಯೋಜನೆಗಳನ್ನು ಜಾರಿಗೆ ತಂದಿದೆ. ಮುಂದಿನ ದಿನಗಳಲ್ಲಿ ಎಲ್ಲ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಿದೆ. ಇಂದು ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಎಲ್ಲಾ 5 ಗ್ಯಾರಂಟಿಗಳನ್ನು ಈಡೇರಿಸಲು ತೀರ್ಮಾನ ತೆಗೆದುಕೊಂಡಿದ್ದು, ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಆ ಮೂಲಕ ಕಾಂಗ್ರೆಸ್ ನುಡಿದಂತೆ ನಡೆಯುವ ಸರ್ಕಾರ ಎನ್ನುವುದು ಸಾಬೀತಾಗಿದೆ. ಎಂದು ಶಿವಮೊಗ್ಗ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಹೆಚ್ ಎಸ್ ಸುಂದರೇಶ್ ಹೇಳಿದರು.
ಸಂಭ್ರಮಾಚರಣೆಯಲ್ಲಿ ಮಾಜಿ ಎಂ ಎಲ್ ಸಿ ಪ್ರಸನ್ನಕುಮಾರ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಲೀಮ್ ಪಾಷ, ಜಿಲ್ಲಾ NSUI ನ ಅಧ್ಯಕ್ಷರಾದ ವಿಜಯ್, ಆರಿಫ್, ರವಿ ಕಾಟಿಕೆರೆ, ಹರ್ಷಿತ್, ಗಿರೀಶ್, ಮಲಗೊಪ್ಪ ಶಿವು,ಅಕ್ಬರ್, ಚಂದ್ರೋಜಿ ರಾವ್, ರವಿ,ಚರಣ್, ಸಾಗರ್, ಆಕಾಶ್, ಯುವ ಕಾಂಗ್ರೆಸ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಚೇತನ್, ಯುವ ಕಾಂಗ್ರೆಸ್ ಮುಖಂಡ ಮಧುಸೂದನ್, ಅಬ್ದುಲ್ ಸತ್ತರ್, ಅನ್ನು, ಹುಸೇನ್, ಬಸವರಾಜ್, ಅಭಿ ಹಾಗೂ ನೂರಾರು ಯುವಕರು ಕಾರ್ಯಕರ್ತರು ಪಾಲ್ಗೊಂಡಿದ್ದರು ಸಂಭ್ರಮಿಸಿದರು
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments