ರಾಜ್ಯದಲ್ಲಿ ಗೊಂದಲ ನಿರ್ಮಾಣ ಮಾಡುವ ಪ್ರಯತ್ನವನ್ನು ಕೆಲವು ಸಾಹಿತಿಗಳು ಮಾಡ್ತಿದ್ದಾರೆ – ಕೆ.ಎಸ್. ಈಶ್ವರಪ್ಪ.
Cnewstv.in / 06.06.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ರಾಜ್ಯದಲ್ಲಿ ಗೊಂದಲ ನಿರ್ಮಾಣ ಮಾಡುವ ಪ್ರಯತ್ನವನ್ನು ಕೆಲವು ಸಾಹಿತಿಗಳು ಮಾಡ್ತಿದ್ದಾರೆ – ಕೆ.ಎಸ್. ಈಶ್ವರಪ್ಪ.
ಶಿವಮೊಗ್ಗ : ಪಠ್ಯ ಪುಸ್ತಕ ಪರಿಷ್ಕರಣ ವಿಚಾರಕ್ಕೆ ಸಂಬಂಧಿಸಿದಂತೆ, ರಾಜ್ಯದಲ್ಲಿ ಗೊಂದಲ ನಿರ್ಮಾಣ ಮಾಡುವ ಪ್ರಯತ್ನವನ್ನು ಕೆಲವು ಸಾಹಿತಿಗಳು ಮಾಡ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಈ ಹಿಂದೆ ಬರಗೂರು ರಾಮಚಂದ್ರಪ್ಪ ಇದ್ದಂತಹ ಸಂದರ್ಭದಲ್ಲಿ ಅವರ ವಿಚಾರಕ್ಕೆ ತಕ್ಕಂತೆ ಪಠ್ಯ ಪುಸ್ತಕಗಳನ್ನು ತಂದಿದ್ದರು. ಇವತ್ತು ಭಾರತೀಯ ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ತಲುಪಿಸಬೇಕು ಎಂಬ ಉದ್ದೇಶದಿಂದ ಈ ಪ್ರಯತ್ನ ನಡೆಯುತ್ತಿದೆ. ಯಾವುದು ಸರಿ ಇಲ್ಲ ಎನ್ನುವ ಅಂಶ ಇದೆ ಅದನ್ನ ಪ್ರಾಮಾಣಿಕವಾಗಿ ಹೇಳಿ ತಿದ್ದಿಕೊಳ್ಳಿ ಅಂತೇಳಿ ತಿದ್ದಿಸಬೇಕು.
ಇದರಲ್ಲಿ ರಾಜಕೀಯ, ವೈಚಾರಿಕ ಸಿದ್ದಾಂತ ಇಲ್ಲಿ ತಂದು ಈಡಿ ರಾಜ್ಯದಲ್ಲಿ ಗೊಂದಲ ನಿರ್ಮಾಣ ಮಾಡುವ ಪ್ರಯತ್ನವನ್ನು ಕೆಲವು ಸಾಹಿತಿಗಳು ಮಾಡ್ತಿದ್ದಾರೆ. ಪಠ್ಯ ಪುಸ್ತಕದಲ್ಲಿ ಹಾಕಿರುವ ನಮ್ಮ ಪಾಠ ವಾಪಸ್ ತೆಗೆದುಕೊಳ್ಳುತ್ತೇವೆ ಅನ್ನೋದು. ರಾಜಕಾರಣ ಅಲ್ಲದೇ ಮತ್ತೇನು ಎಂದು ಪ್ರಶ್ನಿಸಿದ್ದಾರೆ.
9 ಜನ ನಮ್ಮ ಪಾಠ ಬೇಡ ಅಂತಾ ಪತ್ರ ಬರೆದಿದ್ದಾರೆ. ಅದರಲ್ಲಿ 7 ಜನರ ಪಾಠವನ್ನು ಹಾಕಿಯೇ ಇಲ್ಲ. ಇದರಲ್ಲಿ ಎಷ್ಟು ರಾಜಕಾರಣ ಇದೆ ಎನ್ನುವುದನ್ನು ನೋಡಿ. ಪಠ್ಯ ಪುಸ್ತಕದಲ್ಲಿ ಮಕ್ಕಳಿಗೆ ಯಾವ ಸತ್ಯ ಸಂಗತಿ ತಿಳಿಸಬೇಕೋ, ಅಮೃತ ಮಹೋತ್ಸವ ಬರುವವರೆಗೂ ಸಾಕಷ್ಟು ಕಡೆ ತಿಳಿಸಿಲ್ಲ.
ಟಿಪ್ಪು ಮೈಸೂರು ಹುಲಿ, ಅಲೆಕ್ಸಾಂಡರ್ ದಿ ಗ್ರೇಟ್, ಏಕೆ ನಮ್ಮ ದೇಶದಲ್ಲಿ ಒಳ್ಳೆಯ ಆಡಳಿತಗಾರರು ಇರಲಿಲ್ಲುವಾ ??ಒಬ್ಬನಾದರೂ ಕೂಡಾ ನಾವು ಮೈಸೂರು ಹುಲಿ ಅಂತಾ ಕರೆದಿದ್ದೀವಾ ?? ನಮ್ಮ ನಾಯಕರು, ಮಹಾ ಪುರುಷರನ್ನು ಗ್ರೇಟ್ ಅಂತಾ ಕರೆದಿದ್ದೀವಾ ಎಂದರು…
ಇದನ್ನು ಒದಿ : https://cnewstv.in/?p=10065
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
ರಾಜ್ಯದಲ್ಲಿ ಗೊಂದಲ ನಿರ್ಮಾಣ ಮಾಡುವ ಪ್ರಯತ್ನವನ್ನು ಕೆಲವು ಸಾಹಿತಿಗಳು ಮಾಡ್ತಿದ್ದಾರೆ - ಕೆ.ಎಸ್. ಈಶ್ವರಪ್ಪ. 2022-06-06
Recent Comments