ರಾಜಾಹುಲಿ ಬಿಎಸ್ ಯಡಿಯೂರಪ್ಪನವರ ಕ್ಷೇತ್ರದಲ್ಲಿ ಪುತ್ರನ ಜಯಭೇರಿ ಖಚಿತ…

Cnewstv / 28.04.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ರಾಜಾಹುಲಿ ಬಿಎಸ್ ಯಡಿಯೂರಪ್ಪನವರ ಕ್ಷೇತ್ರದಲ್ಲಿ ಪುತ್ರನ ಜಯಭೇರಿ ಖಚಿತ…

2023ರ ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಶಿಕಾರಿಪುರ ಕ್ಷೇತ್ರ ಕೂಡ ಒಂದು. ಶಿಕಾರಿಪುರ ಎಂದ ಕೂಡಲೇ ಎಲ್ಲರಿಗೂ ನೆನಪಾಗುವ ಹೆಸರೇ ಬಿಎಸ್ ಯಡಿಯೂರಪ್ಪ.

ಹೌದು, ಶಿಕಾರಿಪುರ ಕ್ಷೇತ್ರ ಹಲವು ವರ್ಷಗಳಿಂದ ಬಿಜೆಪಿಯ ತೆಕ್ಕೆಯಲ್ಲಿತ್ತು. ಆದರೆ ಈ ಬಾರಿ ಅವರು ರಾಜಕೀಯ ನಿವೃತ್ತಿ ಘೋಷಣೆ ಮಾಡಿದಾಗ ಕಾರಣ ಆ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಯಾರು ಕಣಕ್ಕಿಳಿಯುತ್ತಾರೆ ಎಂಬುದೇ ಸಾಕಷ್ಟು ಚರ್ಚಗಳನ್ನು ಮೂಡಿಸಿತ್ತು. ಆದರೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿಯೇ ಬಿಎಸ್ ವೈ ಅವರ ಪುತ್ರ ಬಿ ವೈ ವಿಜೇಂದ್ರ ಅವರ ಹೆಸರನ್ನೇ ಘೋಷಣೆ ಮಾಡಲಾಗಿದೆ.

1983 ರಲ್ಲಿ ಬಿಎಸ್ ಯಡಿಯೂರಪ್ಪನವರು ಶಿಕಾರಿಪುರ ಕ್ಷೇತ್ರದಲ್ಲಿ ಯಂಕಟಪ್ಪನವರ ವಿರುದ್ಧ ಸ್ಪರ್ಧೆ ಮಾಡಿ ಮೊದಲ ಬಾರಿಗೆ 20,559 ಮತಗಳ ಅಂತರದಲ್ಲಿ ದಿಗ್ವಿಜಯ ಸಾಧಿಸಿದ್ದರು. ಅಲ್ಲಿನಿಂದ ಆರಂಭವಾದ ಅವರ ವಿಜಯ ಯಾತ್ರೆ 2018ರ ವರೆಗೂ ಮುಂದುವರೆದಿದ್ದು ಈ ಬಾರಿಯೂ ಕೂಡ ವಿಜೇಂದ್ರ ರವರು ಗೆಲ್ಲುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

ಶಿಕಾರಿಪುರ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಗೋಣಿ ಮಾಲತೇಶ್ ಅವರು ಸ್ಪರ್ಧೆ ಮಾಡುತ್ತಿದ್ದಾರೆ.‌ ಇನ್ನೂ ಕಾಂಗ್ರೆಸ್ನ ಪ್ರಬಲ ಆಕಾಂಕ್ಷಿಯಾಗಿದ್ದಂತಹ ನಾಗರಾಜ್ ಗೌಡ ಅವರ ಹೆಸರನ್ನು ಕೈ ಬಿಡಲಾಗಿದ್ದು ಅವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ.

ಶಿಕಾರಿಪುರ ಕಾಂಗ್ರೆಸ್ನ ಪ್ರಬಲ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದ ನಾಗರಾಜ್ ಗೌಡ ಹೆಸರನ್ನು ಪಟ್ಟಿಯಿಂದ ಕೈ ಬಿಡಲಾಗಿದ್ದು, ಗೋಣಿ ಮಾಲತೇಶ್ ಅವರಿಗೆ ಟಿಕೆಟ್ ನೀಡಲಾಗಿದೆ. ಇದರಿಂದ ನಾಗರಾಜ್ ಗೌಡ ಅವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದಾರೆ. ಬಂಡಾಯದ ಬಿಸಿಯಿಂದಾಗಿ ವಿಜೇಂದ್ರ ರವರಿಗೆ ಲಾಭವೇ ಹೆಚ್ಚು.

ವಿಜೇಂದ್ರ ರವರ ಗೆಲುವಿಗೆ ಪೂರಕವಾಗಿರುವ ಮತ್ತೊಂದು ಅಂಶ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಯನ್ನೇ ಘೋಷಣೆ ಮಾಡಿಲ್ಲದೆ ಇರುವುದು. ಆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಯಾರು ಸ್ಪರ್ಧೆ ಮಾಡುತ್ತಿಲ್ಲ. ಆದರೆ ಪ್ರತ್ಯೇಕ ಅಭ್ಯರ್ಥಿಗೆ ಬೆಂಬಲ ಸೂಚಿಸುವುದಾಗಿ ಹೇಳಿದ್ದರು ಕೂಡ ಹೆಚ್ಚು ಲಾಭ ವಿಜೇಂದ್ರ ರವರಿಗೆ ಆಗಲಿದೆ ಎಂದು ಹೇಳಲಾಗುತ್ತಿದೆ.

ಗೆಲುವನ್ನು ನಿಶ್ಚಯಿಸುವ ಪ್ರಮುಖ ಅಂಶಗಳಲ್ಲಿ ಒಂದಾದಂತಹ ಸಮುದಾಯಗಳ ಬೆಂಬಲವೂ ಕೂಡ ವಿಜೇಂದ್ರ ರವರಿಗೆ ಇದೆ. ಲಿಂಗಾಯತ ಸಮುದಾಯದ ಹಿರಿಯ ನಾಯಕರಾದ ಬಿಎಸ್ ಯಡಿಯೂರಪ್ಪನವರ ಮಾತಿಗೆ ಸಾಕಷ್ಟು ಗೌರವವಿದೆ ಅವರ ಪುತ್ರರಿಗೆ ಸಂಪೂರ್ಣ ಬೆಂಬಲ ದೊರಕಲಿದೆ. ಆದರೆ ಕೆಳ ದಿನಗಳ ಹಿಂದೆ ಒಳ ಮೀಸಲಾತಿ ಸಂಬಂಧಿಸಿದಂತೆ ಬಂಜಾರ ಸಮುದಾಯದ ಪ್ರತಿಭಟನೆಯ ಬಿಸಿಯನ್ನು ನಾವು ಮರೆಯಲು ಸಾಧ್ಯವಿಲ್ಲ.

ಬಿಎಸ್ ಯಡಿಯೂರಪ್ಪನವರ 7 ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಶಿಕಾರಿಪುರ ಕ್ಷೇತ್ರ ಅವರ ಆಯ್ಕೆಯ ನಂತರ ಅಭಿವೃದ್ಧಿಯಾಗಿದೆ ಎಂಬ ಮಾತುಗಳು ಎಲ್ಲೆಡೆ ಕೇಳಿ ಬಂದಿದೆ. ಅದರೆ ಅವರು ಚುನಾವಣಾ ನಿವೃತ್ತಿಯನ್ನು ಘೋಷಣೆ ಮಾಡಿದ್ದು ಇದೇ ಕಾರಣಕ್ಕೆ ಹೊಸ ನಾಯಕನ ಹುಡುಕಾಟದಲ್ಲಿದ್ದ ಶಿಕಾರಿಪುರ ಕ್ಷೇತ್ರದ ಮತದಾರರಿಗೆ ಅವರ ಪುತ್ರ ವೈ ವಿಜಯೇಂದ್ರ ಅವರೇ ಸರಿಯಾದ ಅಭ್ಯರ್ಥಿ ಎಂಬ ಭರವಸೆಯ ಮಾತುಗಳು ಕೇಳಿ ಬರುತ್ತಿದೆ.

ಈ ಎಲ್ಲಾ ಲೆಕ್ಕಾಚಾರಗಳನ್ನು ಅಳೆದು ತೂಗಿ ನೋಡಿದರೆ ಬಿ ವೈ ವಿಜೇಂದ್ರ ರವರೆ ಗೆಲುವು ಖಚಿತ ಎಂದು ಹೇಳಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಎಲ್ಲಾ ಲೆಕ್ಕಾಚಾರಗಳಿಗೆ ಪಕ್ಕ ಉತ್ತರವನ್ನು ಮತದಾರರೇ ನೀಡಲಿದ್ದಾರೆ.

Sir

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*

Tags

*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ* *9916660399* Accident Bangalore Bhadravathi BJP B S yaduvurappa B Y Ragavendra Congress Corona Corona report Corona virus Covid 19 Gajanur dam Hosanagara JDS K S Eshwarappa MP election M P Election News NSUI Sagara Shikaripura Shimoga shimoga district Shivammoga Shivamoga Shivamogga Shivamogga NSUI SP shivamogga ಒಮಿಕ್ರಾನ್ ಸೋಂಕಿತರ ಸಂಖ್ಯೆ 578 ಕ್ಕೆ ಏರಿಕೆ. ಕಾಂಗ್ರೆಸ್ ಕೊರೊನಾ ಕೋಟೆ ಶ್ರೀ ಮಾರಿಕಾಂಬ ಜಾತ್ರೆ : ಇಂದು ಗಾಂಧಿಬಜಾರ್ ನಲ್ಲಿ ಚಪ್ಪರ ಪೂಜೆ.‌ ಚಾರುಲತಾ ಸೋಮಲ್‌ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 791 ಕೊರೊನಾಗೆ 7 ಜನ ಬಲಿ ಜಿಲ್ಲೆಯಲ್ಲಿ ಎರಡಂಕಿಗೆ ಇಳಿದ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 38 ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ. ನಾಳೆ ನಗರದಲ್ಲಿ ವಿದ್ಯುತ್ ವ್ಯತ್ಯಯ. ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಸಿಗಂದೂರು

Recent Comments