ರಾವ್‌ ಸ್ಪೋರ್ಟ್ಸ್‌ ಅರೆನಾ : ಅಂತರಾಷ್ಟ್ರೀಯ ಗುಣಮಟ್ಟದ ಷಟಲ್‌ ಬ್ಯಾಡ್ಮಿಂಟನ್‌ ಹಾಗೂ ಕ್ರಿಕೆಟ್‌ ಒಳಾಂಗಣ ಕ್ರೀಡಾಂಗಣ.

Cnewstv / 11.02.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ರಾವ್‌ ಸ್ಪೋರ್ಟ್ಸ್‌ ಅರೆನಾ : ಅಂತರಾಷ್ಟ್ರೀಯ ಗುಣಮಟ್ಟದ ಷಟಲ್‌ ಬ್ಯಾಡ್ಮಿಂಟನ್‌ ಹಾಗೂ ಕ್ರಿಕೆಟ್‌ ಒಳಾಂಗಣ ಕ್ರೀಡಾಂಗಣ.

ಶಿವಮೊಗ : ನಗರದಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಷಟಲ್‌ ಬ್ಯಾಡ್ಮಿಂಟನ್‌ ಹಾಗೂ ಕ್ರಿಕೆಟ್‌ ಗಾಗಿ ಸುಸಜ್ಜಿತವಾದ ಒಳಾಂಗಣ ಕ್ರೀಡಾಂಗಣ ರಾವ್‌ ಸ್ಪೋರ್ಟ್ಸ್‌ ಅರೆನಾ ಆರಂಭಗೊಂಡಿದೆ.

ಶಿವಮೊಗ್ಗದ ಗುಂಡಪ್ಪ ಶೆಡ್‌ ನಲ್ಲಿರುವ ರಾಮರಾವ್‌ ಲೇಔಟ್‌ನಲ್ಲಿ ಸುಂದರವಾದ ಪರಿಸರದಲ್ಲಿರುವ ಈ ಕ್ರೀಡಾಂಗಣದಲ್ಲಿ ಷಟಲ್‌ ಬ್ಯಾಡ್ಮಿಂಟನ್‌ಗಾಗಿ ಐದು ಕೋರ್ಟ್‌ ಹಾಗೂ ಕ್ರಿಕೆಟ್‌ ಗಾಗಿ ಮೂರು ಪಿಚ್ ಗಳನ್ನು ನಿರ್ಮಿಸಲಾಗಿದೆ. ಇಂಡೋರ್‌ ಕ್ರಿಕೆಟ್‌ ಪಿಚ್‌ ಶಿವಮೊಗ್ಗದಲ್ಲೇ ಇದು ಮೊದಲನೆಯದ್ದಾಗಿದೆ.

ಈ ಕ್ರೀಡಾಂಗಣ ಬೆಳಗ್ಗೆ 5ಗಂಟೆಯಿಂದ ರಾತ್ರಿ 10ಗಂಟೆಯವರೆಗೆ ಕ್ರೀಡಾಪಟುಗಳಿಗೆ ತೆರೆದಿರುತ್ತದೆ. ಬ್ಯಾಡ್ಮಿಂಟನ್‌ ನ ಐದು ಕೋರ್ಟ್‌ ಗಳಲ್ಲಿ ನಿತ್ಯವೂ ತರಬೇತಿ ನಡೆಯಲಿದೆ, ಅಲ್ಲದೆ, ನಿತ್ಯವೂ ಕ್ರೀಡಾಪಟುಗಳು ಬಂದು ಅಭ್ಯಾಸ ನಡೆಸಲು ಅವಕಾಶವಿದೆ.

ಮುಖ್ಯ ತರಬೇತುದಾರ ಅರುಣ್‌ ಆರ್ ರಾಜ್ಯ ಷಟಲ್‌ ಬ್ಯಾಡ್ಮಿಂಟನ್‌ ಅಸೋಷಿಯೇಷನ್‌ ಕಾರ್ಯನಿರ್ವಾಹಕ ಮಂಡಳಿಯ ಸದಸ್ಯರಾಗಿರುವ ಆರ್. ಅರುಣ್‌ ಮಲೆನಾಡಿನ ಹೆಮ್ಮೆಯ ಕ್ರೀಡಾಪಟು. ಶಿವಮೊಗ್ಗ ಜಿಲ್ಲಾ ಷಟಲ್‌ ಬ್ಯಾಡ್ಮಿಂಟನ್‌ ಅಸೋಷಿಯೇಷನ್‌ ಕಾರ್ಯದರ್ಶಿಯಾಗಿಯೂ ಸೇವೆ ಸಲಿಸುತ್ತಿದ್ದಾರೆ.

ಶಿವಮೊಗ್ಗದಲ್ಲಿ ಕಳೆದ ಎರಡು ದಶಕಗಳಿಂದ ಷಟಲ್‌ ಬ್ಯಾಡ್ಮಿಂಟನ್‌ ಕೋಚ್‌ ಆಗಿ ಸೇವೆ ಸಲ್ಲಿಸುತ್ತಿರುವ ಅರುಣ್‌ ಆರ್. ಅವರು ರಾವ್‌ ಸ್ಪೋರ್ಟ್ಸ್‌ ಅರೆನಾದ ಮುಖ್ಯಸ್ಥರಾಗಿದ್ದಾರೆ. ಇವರಿಂದ ತರಬೇತಿ ಪಡೆದ 15 ಕ್ಕೂ ಹೆಚ್ಚು ಕ್ರೀಡಾಪಟುಗಳು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಥಾನಗಳನ್ನು ಪಡೆದಿದ್ದಾರೆ. ಇವರೊಂದಿಗೆ ಆರ್. ಆದಿತ್ಯ ಅವರೂ ರಾವ್‌ ಸ್ಪೋರ್ಟ್ಸ್‌ ಅರೆನಾದ ಪ್ರಮುಖ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಅರುಣ್‌ ಹಾಗೂ ಆದಿತ್ಯ ಅವರೊಂದಿಗೆ ಬೆಂಗಳೂರಿನಲ್ಲಿ ಇರುವ ಅಜಯ್‌ ಕೂಡಾ ರಾವ್‌ ಸ್ಪೋರ್ಟ್ಸ್‌ ಅರೆನಾದಲ್ಲಿ ವಿವಿಧ ತರಬೇತಿ ಶಿಬಿರಗಳಿಗೆ ಕೈಜೋಡಿಸಲಿದ್ದಾರೆ.

ಈ ಕ್ರೀಡಾಂಗಣದಲ್ಲಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪಂದ್ಯಗಳನ್ನು ನಡೆಸಲು ಅವಕಾಶವಿದೆ. ಜೊತೆಗೆ ಬೇರೆ ಬೇರೆ ಕ್ಲಬ್‌ ಗಳೂ ಇಲ್ಲಿ ತರಬೇತಿ ನೀಡಲು ಅವಕಾಶವಿದೆ. ವೈಯಕ್ತಿಕವಾಗಿ ತರಬೇತಿ ಪಡೆಯಲೂ ಅವಕಾಶವಿದೆ. ವರ್ಷವಿಡೀ ಬೇರೆಬೇರೆ ವಯೋಮಾನದವರಿಗೆ ವಿಶೇಷ ತರಬೇತಿ ಶಿಬಿರಗಳನ್ನು ಆಯೋಜನೆ ಮಾಡಲು ಉದ್ದೇಶಿಸಲಾಗಿದೆ. ಶಿವಮೊಗ್ಗದಲ್ಲಿ ಸರಿಸುಮಾರು 4-5 ತಿಂಗಳು ಮಳೆ ಬರುತ್ತದೆ. ಈ ಸಂದರ್ಭದಲ್ಲಿ ಕ್ರೀಡಾಪಟುಗಳ ಅಭ್ಯಸವೇ ನಿಂತು ಹೋಗುತ್ತದೆ. ಆದರೆ, ರಾವ್‌ ಸ್ಪೋರ್ಟ್‌ ಅರೆನಾದಲ್ಲಿ ಯಾವುದೇ ಅಡೆತಡೆ ಇಲ್ಲದೆ ತರಬೇತಿ- ಅಭ್ಯಾಸ ಪಡೆಯಬಹುದಾಗಿದೆ.

 ಕ್ರೀಡಾಂಗಣದ ವಿವರ:

• 100 ಕೆಲಸದ ದಿನಗಳಲ್ಲಿ ವಿಶ್ವ ದರ್ಜೆಯ ಈ ಕ್ರೀಡಾಂಗಣ ನಿರ್ಮಾಣವಾಗಿದೆ.

• 12500 ಚದರ ಅಡಿ ವಿಸ್ತೀರ್ಣದಲ್ಲಿರುವ ಈ ಕ್ರೀಡಾಂಗಣ 37 ಅಡಿ ಎತ್ತರವಿದೆ.

• ನೆಲಹಾಸು: ಸಿಲಿಕಾನ್ ತಂತ್ರಜ್ಞಾನ ಜರ್ಮನ್ ಇಂಜಿನಿಯರ್ಡ್ ಹೈಬ್ರಿಡ್ ಬ್ಯಾಡ್ಮಿಂಟನ್ ಕೋರ್ಟ್ ಮತ್ತು ಕ್ರಿಕೆಟ್ ಆಸ್ಟ್ರೋ ಟರ್ಫ್ ಪಿಚ್‌ ಇದೆ.

• ಎಲ್‌ಇಡಿ ಲೈಟ್‌ಗಳು: ಈ ಕ್ರೀಡಾಂಗಣದಲ್ಲಿ ಅಳವಡಿಸಿರುವ ವಿಶೇಷ ಎಲ್‌ಇಡಿ ಲೈಟ್‌ ಗಳಿಗೆ 350 ಲಕ್ಸ್ ಮಟ್ಟವಿದೆ. ಈ ಬೆಳಕಿನಲ್ಲಿ ಶಟಲ್‌ಗಳು ಗಂಟೆಗೆ ೪00ಕಿಮೀ ವೇಗದಲ್ಲಿ ಸಾಗುವಾಗಲೂ ಸ್ಪಷ್ಟವಾಗಿ ಗೋಚರಿಸುತ್ತವೆ.

• ದ್ವಿಚಕ್ರ ಮತ್ತು 4 ಚಕ್ರದ ವಾಹನಗಳಿಗೆ ಸಾಕಷ್ಟು ಪಾರ್ಕಿಂಗ್ ಸ್ಥಳ.

• ಸುಸಜ್ಜಿತ ಸ್ನಾನಗೃಹಗಳು ಮತ್ತು ಬಟ್ಟೆ ಬದಲಾವಣೆ ಕೊಠಡಿಗಳು.

• ಶುದ್ಧ ಕುಡಿಯುವ ನೀರು.

• 20 ವರ್ಷಗಳ ಅನುಭವ ಹೊಂದಿರುವ ರಾಷ್ಟ್ರೀಯ ಮಟ್ಟದ ತರಬೇತುದಾರರು.

• ಹೊರಾಂಗಣ ಫಿಟ್ನೆಸ್ ಪ್ರದೇಶ.

• 24 ಗಂಟೆಗಳ ಪವರ್ ಬ್ಯಾಕ್ ಅಪ್ ಇಷ್ಟೆಲ್ಲಾ ಸೌಲಭ್ಯಗಳಿರುವ ಈ ರಾವ್‌ ಸ್ಪೋರ್ಟ್ಸ್‌ ಅರೆನಾದಿಂದ ಮಲೆನಾಡಿನಲ್ಲಿ ಷಟಲ್‌ ಬ್ಯಾಡ್ಮಿಂಟನ್‌ ಹಾಗೂ ಕ್ರಿಕೆಟ್‌ ನಲ್ಲಿ ವಿಶೇಷ ಸಾಧನೆ ಮಾಡಲು ಕ್ರೀಡಾಪಟುಗಳಿಗೆ ಅವಕಾಶ ಸಿಗಲಿದೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*

Tags

*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ* *9916660399* Accident Bangalore Bhadravathi BJP B S yaduvurappa B Y Ragavendra Congress Corona Corona report Corona virus Covid 19 Gajanur dam Hosanagara JDS K S Eshwarappa MP election M P Election News NSUI Sagara Shikaripura Shimoga shimoga district Shivammoga Shivamoga Shivamogga Shivamogga NSUI SP shivamogga ಒಮಿಕ್ರಾನ್ ಸೋಂಕಿತರ ಸಂಖ್ಯೆ 578 ಕ್ಕೆ ಏರಿಕೆ. ಕಾಂಗ್ರೆಸ್ ಕೊರೊನಾ ಕೋಟೆ ಶ್ರೀ ಮಾರಿಕಾಂಬ ಜಾತ್ರೆ : ಇಂದು ಗಾಂಧಿಬಜಾರ್ ನಲ್ಲಿ ಚಪ್ಪರ ಪೂಜೆ.‌ ಚಾರುಲತಾ ಸೋಮಲ್‌ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 791 ಕೊರೊನಾಗೆ 7 ಜನ ಬಲಿ ಜಿಲ್ಲೆಯಲ್ಲಿ ಎರಡಂಕಿಗೆ ಇಳಿದ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 38 ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ. ನಾಳೆ ನಗರದಲ್ಲಿ ವಿದ್ಯುತ್ ವ್ಯತ್ಯಯ. ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಸಿಗಂದೂರು

Recent Comments