Breaking News

Tag Archives: Corona

ಅಧಿಕಾರಿಗಳು ಹಾಗೂ ಸಿಬ್ಬಂದಿ ದಿವ್ಯ ನಿರ್ಲಕ್ಷ ಕರೊನಾದಿಂದ ಮೃತಪಟ್ಟ ವ್ಯಕ್ತಿಯ ಶವಕ್ಕೆ ಅಪೂರ್ಣ ಅಂತ್ಯಕ್ರಿಯೆ..

  ಶಿವಮೊಗ್ಗ : ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನಡೆಸಲು ಶಿವಮೊಗ್ಗ ಮಹಾನಗರ ಪಾಲಿಕೆ ಸಿದ್ಧವಾಗಿದ್ದು ಆದರೆ ಇದನ್ನು ಸ್ಥಳೀಯರು ವಿರೋಧಿಸಿದರು. ಸ್ಥಳೀಯರ ವಿರೋಧದ ನಡುವೆಯೇ ನೆನ್ನೆ ರಾತ್ರಿ ಅಂತ್ಯಸಂಸ್ಕಾರವನ್ನು ನಡೆಸಿದ್ದಾರೆ ಆದರೆ ಇದನ್ನು ಸಹ ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಬೇಜವಾಬ್ದಾರಿಯಿಂದ ನಿರ್ಲಕ್ಷದಿಂದ ನಡೆಸಿದ್ದಾರೆ. ಅಪೂರ್ಣ ಅಂತ್ಯಸಂಸ್ಕಾರ ನಡೆಸಿ ಶವದ ಮೇಲೆ ಕಟ್ಟಿಗೆಗಳನ್ನು ಇಟ್ಟು ಹೋಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಮಹಾನಗರಪಾಲಿಕೆಯ ವಿರೋಧ ಪಕ್ಷದ ನಾಯಕರಾದ H C ...

Read More »

ಜುಲೈ 13 ರಿಂದ ಅಗಸ್ಟ್ 13ರವರೆಗೆ ಗಾಂಧಿಬಜಾರ್ ನಲ್ಲಿ ಸ್ವಯಂ ಪ್ರೇರಿತ ಬಂದ್

  ಶಿವಮೊಗ್ಗ : ಮಹಾಮಾರಿ ಕರೋನಾ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಗಾಂಧಿ ಬಜಾರ್ ನಲ್ಲಿ ಮುಂಜಾಗ್ರತಾ ಕ್ರಮವಾಗಿ ಜುಲೈ 13 ರಿಂದ ಆಗಸ್ಟ್ 12 ರವರೆಗೆ ಅರ್ಧ ದಿನ ವ್ಯಾಪಾರ ಮಾಡಲು ನಿರ್ಧರಿಸಲಾಗಿದೆ. ಬೆಳ್ಳಿಗೆ 8 ರಿಂದ ಮಧ್ಯಾಹ್ನ 3 ಗಂಟೆಯ ತನಕ ಮಾತ್ರ ವ್ಯಾಪಾರ ವಹಿವಾಟು ನಡೆಯಲಿದ್ದು, 3 ಗಂಟೆಯ ನಂತರ ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟು ಬಂದ್ ಮಾಡಲು ನಿರ್ಧರಿಸಿದ್ದಾರೆ. ಪುಟ್ ಬಾತ್ ನಲ್ಲಿ ವ್ಯಾಪಾರ ಮಾಡುವುದು ಹಾಗೂ ...

Read More »

ಜಿಲ್ಲೆಯಲ್ಲಿ ಮತ್ತೊಂದು ಕರೋನಾ ಪಾಸಿಟಿವ್ ಪ್ರಕರಣ

  ಶಿವಮೊಗ್ಗ : ಮುಂಬಯಿಯಿಂದ ಹಿಂತಿರುಗಿದ್ದ ತೀರ್ಥಹಳ್ಳಿಯ ವ್ಯಕ್ತಿಯೊಬ್ಬರಿಗೆ ಕರೋನಾ ಸೋಂಕು ಪಾಸಿಟಿವ್ ಕಂಡು ಬಂದಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು. ಸೋಂಕಿತ ವ್ಯಕ್ತಿ ಈಗಾಗಲೇ ಕ್ವಾರೆಂಟೈನ್‍ನಲ್ಲಿದ್ದ ಕಾರಣ ಆತಂಕ ಪಡುವ ಅಗತ್ಯವಿಲ್ಲ. ಆ ವ್ಯಕ್ತಿಯೊಂದು ಪ್ರಾಥಮಿಕವಾಗಿ ಸಂಬಂಧ ಹೊಂದಿದ್ದ 12 ಮಂದಿಯನ್ನು ಗುರುತಿಸಲಾಗಿದ್ದು, ಎಲ್ಲರನ್ನು ಕ್ವಾರೆಂಟೈನ್ ಮಾಡಲಾಗಿದೆ. ಇನ್ನುಳಿದಂತೆ ದ್ವಿತೀಯ ಹಂತದ ಸಂಪರ್ಕ ಹೊಂದಿದ್ದ ವ್ಯಕ್ತಿಗಳನ್ನು ಗುರುತಿಸಿ ತಕ್ಷಣ ಕ್ವಾರೆಂಟೈನ್ ಮಾಡಲಾಗುವುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು..ಅಲ್ಲದೆ ಕೊರೋನ ಪಾಸಿಟಿವ್ ಕಂಡುಬಂದ ವ್ಯಕ್ತಿಯು ಮುಂಬೈನಿಂದ ಬಂದಿರುವುದಾಗಿ ಸ್ಪಷ್ಟಪಡಿಸಿದರು.

Read More »

ಗುಜರಾತ್, ಮಾಹಾರಾಷ್ಟ್ರದಿಂದ ಬಂದವರಿಂದ ಶಿವಮೊಗ್ಗದಲ್ಲಿ ಕರೋನಾ ಆತಂಕ

ಶಿವಮೊಗ್ಗ: ಇಷ್ಟು ದಿನ ಶಿವಮೊಗ್ಗ ಜಿಲ್ಲೆ ಕರೋನಾ ವಿಷಯದಲ್ಲಿ ಹಸಿರು ವಲಯದಲ್ಲಿತ್ತು. ನಿನ್ನೆ ರಾತ್ರಿ ಶಿವಮೊಗ್ಗಕ್ಕೆ ಗುಜರಾತ್ ಹಾಗೂ ಮಹಾರಾಷ್ಟ್ರದಿಂದ 30ಕ್ಕೂ ಹೆಚ್ಚು ಜನರು ಆಗಮಿಸಿದ್ದು, ಇದರಿಂದಾಗಿ ಮಲೆನಾಡು ಆತಂಕಕ್ಕೊಳಗಾಗಿದೆ. ಗುಜರಾತ್ ನ ಅಹಮದಾಬಾದ್ ನಿಂದ ಶಿವಮೊಗ್ಗಕ್ಕೆ ಆಗಮಿಸಿದವರು ತಬ್ಲಿಘಿ ನಂಟು ಹೊಂದಿರುವ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಹೀಗೆ ಶಿವಮೊಗ್ಗಕ್ಕೆ ಆಗಮಿಸಿದ ಎಲ್ಲರಿಗೂ ಸಹ್ಯಾದ್ರಿ ಕಾಲೇಜಿನ ಸ್ಟೇಡಿಯಂ ನಲ್ಲಿ ಆರೋಗ್ಯ ತಪಾಸಣೆ ನಡೆಸಲಾಗಿದ್ದು ಎಲ್ಲರನ್ನೂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ‌.

Read More »

ಮಾಸ್ಕ್ ಧರಿಸದಿದ್ದರೆ, ಸಾರ್ವಜನಿಕ ಸ್ಥಳದಲ್ಲಿ ಉಗುಳಿದರೆ ದಂಡ ಫಿಕ್ಸ್

  ಶಿವಮೊಗ್ಗ :  ಜಿಲ್ಲೆಯಲ್ಲಿ ಇನ್ಮುಂದೆ ಮಾಸ್ಕ್ ಇಲ್ಲದೆ ಓಡಾಡುವಂತಿಲ್ಲ ಜೊತೆಗೆ ಎಲ್ಲೆಂದರಲ್ಲಿ ಉಗುಳುವಂತೆಯೂ ಇಲ್ಲ. ಒಂದು ವೇಳೆ ಮಾಸ್ಕ ಇಲ್ಲದಿದ್ದರೆ ಹಾಗೂ ಎಲ್ಲೆಂದರಲ್ಲಿ ಉಗುಳಿದರೆ ದಂಡ ಕಟ್ಟುವುದು ಅನಿವಾರ್ಯ. ಹೌದು ಶಿವಮೊಗ್ಗ ಜಿಲ್ಲೆಯಲ್ಲಿ ಕರೋನಾ ವೈರಸ್ ಹರಡುವುದನ್ನು ತಡೆಯುವ ಉದ್ದೇಶದಿಂದ ಶಿವಮೊಗ್ಗ ಜಿಲ್ಲಾಡಳಿತ ಆರಂಭದಿಂದಲೂ ಹಲವು ವಿನೂತನ ಕ್ರಮಕೈಗೊಂಡು ಯಶಸ್ವಿಯಾಗಿದೆ. ಇದೀಗ ಅದೇ ರೀತಿ ಅನಗತ್ಯವಾಗಿ ಮನೆಯಿಂದ ಹೊರಗೆಬರುವವರಿಗೆ ಬಿಸಿ‌ಮುಟ್ಟಿಸಲು ಜಿಲ್ಲಾಡಳಿತ ಮುಂದಾಗಿದೆ. ಮನೆಯಿಂದ ಹೊರಬರುವಾಗ ಮಾಸ್ಕ್ ಧರಿಸದೇ ಇದ್ದವರಿಗೆ ಮೊದಲನೆ ಬಾರಿ ನೂರು ರೂಪಾಯಿ ದಂಡ ವಿಧಿಸಲಾಗುತ್ತಿದೆ. ಎರಡನೆ ಬಾರಿಯೂ ಮಾಸ್ಕ್ ...

Read More »