Breaking News

ಲಾಲ್ ಕೃಷ್ಣ ಅಧ್ವಾನಿ ಅವರಿಗೆ ಭಾರತರತ್ನ ನೀಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ

ವಿಧಾನ ಪರಿಷತ್ ಮಾಜಿ ಸಭಾಪತಿಗಳಾದ ಡಿ. ಹೆಚ್. ಶಂಕರಮೂರ್ತಿಯವರು ಲಾಲ್ ಕೃಷ್ಣ ಅಧ್ವಾನಿ ಅವರಿಗೆ ಭಾರತರತ್ನ ನೀಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಯವರಿಗೆ ಪತ್ರ ಬರೆದಿದ್ದಾರೆ.

ಲಾಲಕೃಷ್ಣ ಅಡ್ವಾಣಿ ಜಿ ಅವರು ಸಾಮಾಜಿಕ ಸೇವೆಯಲ್ಲಿ ಸುಮಾರು ಏಳು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅವರ ತ್ಯಾಗ ಮತ್ತು ಕೊಡುಗೆ ನಮ್ಮ ದೇಶಕ್ಕೆ ಅಪಾರ. ಭಾರತೀಯ ಜನಸಂಘ ಹಾಗೂ ಭಾರತೀಯ ಜನತಾ ಪಕ್ಷಕ್ಕೆ ಅವರ ಸೇವೆ ಅತ್ಯದ್ಭುತವಾಗಿದೆ. ಅವರ ನಿಷ್ಠೆ ,ಪ್ರಾಮಾಣಿಕತೆ, ನಾಯಕತ್ವದ ಗುಣ, ಜ್ಞಾನ ಮತ್ತು ಅನುಭವ ಎಲ್ಲಾ ರೀತಿಯಿಂದಲೂ ದೇಶಕ್ಕೆ ಹಾಗೂ ಅಂತರ್ರಾಷ್ಟ್ರೀಯ ವ್ಯವಹಾರಗಳಲ್ಲಿ ನಮ್ಮ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅದ್ವಾನಿ ಜಿಯವರು ನಮ್ಮ ದೇಶದ ಹೆಮ್ಮೆ. ನಾನು ಅವರ ಭಾಷಣಗಳನ್ನು ಸುಮಾರು 50 ವರ್ಷಗಳ ಕಾಲ ಅನು ವಾದಿಸುತ್ತಿದ್ದೆ. ಲಾಲ್ ಕೃಷ್ಣ ಅಧ್ವಾನಿ ಜಿ ಅವರು ಭಾರತ ರತ್ನ ಪ್ರಶಸ್ತಿಗೆ ಪಾತ್ರರಾಗಲು ಎಲ್ಲಾ ರೀತಿಯಿಂದಲೂ ಶ್ರೇಷ್ಠವೆಂದು ನನ್ನ ಅನಿಸಿಕೆ. ಕರ್ನಾಟಕದ ಸಾವಿರಾರು ಜನರ ಪರವಾಗಿ ಶ್ರೀ ಲಾಲ್ ಕೃಷ್ಣ ಅಧ್ವಾನಿ ಜಿ ಅವರಿಗೆ ಭಾರತರತ್ನ ಕೊಡಬೇಕೆಂದು ನಾನು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ಉಲೇಖಿಸಿದ್ದಾರೆ.

 

Leave a Reply

Your email address will not be published. Required fields are marked *

*