ಸ್ನೇಹಿತರೆ 1901 ರಲ್ಲಿ ಜಿಲೆಟ್ ಕಂಪನಿಯ ಮಾಲೀಕ ಕಿಂಗ್ ಕಾಂಪ್ ಜಿಲೆಟ್ ಅನ್ನುವ ವ್ಯಕ್ತಿ ತನ್ನ ಸ್ನೇಹಿತರೆ ಜೊತೆ ಸೇರಿಕೊಂಡಿ ಒಂದು ಬ್ಲೇಡ್ ಮತ್ತು ಆ ಬ್ಲೇಡ್ ಫಿಕ್ಸ್ ಮಾಡುವುದಕ್ಕೆ ಒಂದು ರೇಜರ್ ನ ಬ್ಲೂ ಪ್ರಿಂಟ್ ನ್ನ ಸಿದ್ದ ಮಾಡುತ್ತಾರೆ. ಹೀಗೆ 1904 ರಲ್ಲಿ ಅವರು ಈ ಬ್ಲೇಡ್ ಮತ್ತು ರೇಜರ್ ನ್ನ ಮಾರುಕಟ್ಟೆಗೆ ತರಲಾಗುತ್ತದೆ, ಸ್ನೇಹಿತರೆ ಅವರು ತಯಾರು ಮಾಡಿದ ಬ್ಲೇಡ್ ಮದ್ಯೆ ನಾವು ಈಗ ಉಪಯೋಗಿಸುವ ಆಕಾರ ಇರಲಿಲ್ಲ ಮತ್ತು ಅವರ ತಯಾರು ಮಾಡಿದ ಬ್ಲೇಡ್ ಮದ್ಯೆ ಮೂರೂ ಹೋಲ್ ಗಳು ಮಾತ್ರ ಇದ್ದಿದ್ದವು. ಇನ್ನು ಇವರು ತಯಾರು ಮಾಡಿದ ಬ್ಲೇಡ್ ಪ್ರಪಂಚದಲ್ಲಿ ತುಂಬಾ ಫೇಮಸ್ ಆಗುವುದರ ಜೊತೆಗೆ ಅದರ ಬೇಡಿಕೆ ಕೂಡ ಜಾಸ್ತಿ ಆಗುತ್ತದೆ, ಇನ್ನು ಈ ಬ್ಲೇಡ್ ಮತ್ತು ರೇಜರ್ ಗೆ 25 ವರ್ಷಗಳ ಕಾಲ ಪೇಟೆಂಟ್ ರೈಟ್ಸ್ ಕೂಡ ತಗೆದುಕೊಳ್ಳಲಾಗುತ್ತದೆ.
ಇನ್ನು 25 ವರ್ಷದ ನಂತರ ಆ ಪೇಟೆಂಟ್ ರೈಟ್ಸ್ ಪೂರ್ಣ ಆಗುತ್ತದೆ, ಇನ್ನು ಇದನ್ನ ಗಾಳವಾಗಿ ತೆಗೆದುಕೊಂಡ ಹೆನ್ರಿ ಜೆ ಗೈಸ್ಮ್ಯಾನ್ ಅನ್ನುವ ವ್ಯಕ್ತಿ ಪ್ರೊ ಬ್ಯಾಕ್ ರೇಜರ್ ಕೊರ್ಪೊರೇಷನ್ ಅನ್ನುವ ಕಂಪನಿಯನ್ನ ಆರಂಭ ಮಾಡಿ ಅವರಿಂದ ಸ್ವಲ್ಪ ಚನ್ನಾಗಿರುವ ಬ್ಲೇಡ್ ಮತ್ತು ರೇಜರ್ ನ್ನ ಅವರು ತಯಾರು ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ ಮತ್ತು ಈ ಸಮಯದಲ್ಲಿ ಜಿಲೆಟ್ ಕಂಪನಿಯ ವ್ಯಾಪರ ತುಂಬಾ ಕಮ್ಮಿ ಆಗುತ್ತದೆ. ತುಂಬಾ ನಷ್ಟದ ಆದ ಕಾರಣ ಜಿಲೆಟ್ ಕಂಪನಿಯವರು ತಮ್ಮ ಹಳೆಯ ಆಕಾರವನ್ನ ತಗೆದು ಹಾಕಿ ಹೊಸದಾದ ಆಕಾರ ಇರುವ ಬ್ಲೇಡ್ ಮತ್ತು ರೇಜರ್ ನ್ನ ಬಿಡುಗಡೆ ಮಾಡುತ್ತಾರೆ. ಈ ಸಮಯದಿಂದ ಈ ಎರಡು ಕಂಪನಿಯವರಿಗೆ ಒಬ್ಬರನ್ನ ಕಂಡರೆ ಒಬ್ಬರಿಗೆ ಆಗುವುದಿಲ್ಲ.
ಇನ್ನು ಹಲವು ವರ್ಷಗಳ ನಂತರ ನಾವು ಈಗ ಪಯೋಗ ಮಾಡುತ್ತಿರುವ ಬ್ಲೇಡ್ ಗ ಆಕಾರ ಈಗ ಫೈನಲ್ ಆಕರವಾಗಿ ಉಳಿದುಕೊಂಡಿದೆ. ಇನ್ನು ಬ್ಲೇಡ್ ತುಂಬಾ ತೆಳು ಆಗಿರುವ ಕಾರಣ ಬ್ಲೇಡ್ ನ ಮದ್ಯೆ ಹೋಲ್ ಅಥವಾ ಜಾಗವನ್ನ ಕೊಟ್ಟಿಲ್ಲ ಅಂದರೆ ನಾವು ಶವೇ ಮಾಡಿಕೊಳ್ಳುವಾಗ ಆ ಬ್ಲೇಡ್ ಕಟ್ ಆಗಿ ನಮಗೆ ಗಾಯವಾಗುವ ಸಾಧ್ಯತೆ ತುಂಬಾ ಜಾಸ್ತಿ ಇರುತ್ತದೆ. ಇನ್ನು ಬ್ಲೇಡ್ ನ ಫಿಕ್ಸ್ ಮಾಡುವ ರೇಜರ್ ಹೊಸ ಮಾಡೆಲ್ ಆಗಿರಬಹುದು ಅಥವಾ ಹಳೆಯ ಮಾಡೆಲ್ ಆಗಿರಬಹುದು ಯಾವುದಕ್ಕೆ ಬ್ಲೇಡ್ ಫಿಕ್ಸ್ ಮಾಡಿದರು ಅದಕ್ಕೆ ಕರೆಕ್ಟ್ ಆಗಬೇಕು ಅನ್ನುವ ಉದ್ದೇಶದಿಂದ ಬ್ಲೇಡ್ ಗಳ ಮದ್ಯೆ ಆ ಆಕಾರವನ್ನ ಇಡಲಾಗುತ್ತದೆ. ಸ್ನೇಹಿತರೆ ಬ್ಲೇಡ್ ಬಗೆಗಿನ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಮಾಹಿತಿ: ಸಂಗ್ರಹ