Breaking News

ವಿದ್ಯುತ್‌ ಬಳಸದೆ 79 ವರ್ಷದಿಂದ ಪ್ರಕೃತಿಯ ಮಡಿಲಲ್ಲಿ ಜೀವನ ಮಾಡುತ್ತಿರುವ ಅಜ್ಜಿ!

ವಿದ್ಯುತ್‌ ಬಳಸದೆ 79 ವರ್ಷದಿಂದ ಪ್ರಕೃತಿಯ ಮಡಿಲಲ್ಲಿ ಜೀವನ ಮಾಡುತ್ತಿರುವ ಅಜ್ಜಿ!

ಬೇಸಿಗೆಯ ಬೇಗೆ ಹೆಚ್ಚಾದಂತೆ ಮಹಾರಾಷ್ಟ್ರದ ಪುಣೆಯಲ್ಲಿ 41 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದೆ. ಇಂತಹ ಬಿಸಿಲಿನಲ್ಲಿ ನೀವು ಒಂದು ದಿನವಾದರೂ ವಿದ್ಯುತ್‌ ಇಲ್ಲದೆ ಜೀವಿಸುವ ಬಗ್ಗೆ ಚಿಂತೆ ಮಾಡುತ್ತೀರಾ? ಆದರೆ, ಪುಣೆಯ ಬುಧವಾರ್‌ ಪೇಥ್‌ನಲ್ಲಿ ವಾಸಿಸುತ್ತಿರುವ 79 ವರ್ಷದ ಅಜ್ಜಿ ತನ್ನ ಜೀವನದುದ್ದಕ್ಕೂ ವಿದ್ಯುತ್‌ ಸಂಪರ್ಕವನ್ನೇ ಬಳಸಿಲ್ಲವಂತೆ.

ಪ್ರಕೃತಿ ಹಾಗೂ ಪರಿಸರದ ಮೇಲಿನ ಪ್ರೀತಿಯಿಂದಾಗಿ 79 ವರ್ಷದ ನಿವೃತ್ತ ಪ್ರೊಫೆಸರ್ ಪುಣೆಯ ಬುಧವಾರ್‌ ಪೇಥ್‌ನ ಮನೆಯೊಂದರಲ್ಲಿ ವಾಸಿಸುತ್ತಿದ್ದು ಆಕೆ ತನ್ನ ಜೀವನದುದ್ದಕ್ಕೂ ವಿದ್ಯುತ್ತನ್ನು ಬಳಸಿಲ್ಲ ಎಂದು ತಿಳಿದುಬಂದಿದೆ.

ಜನರು ನನ್ನನ್ನು ಹುಚ್ಚಿ ಎಂದು ಕರೆಯುತ್ತಾರೆ. ಇದಕ್ಕೆಲ್ಲಾ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನಿಷ್ಟದಂತೆ ನಾನು ಬಾಳುತ್ತೇನೆ ಎಂದು ಅಜ್ಜಿ ಹೇಳುತ್ತಾರೆ. ಮರಗಿಡ, ಪಕ್ಷಿಗಳೇ ನನ್ನ ಸ್ನೇಹಿತರು. ಅವುಗಳೊಂದಿಗೆ ಬದುಕುವುದೇ ನನ್ನ ಅಸೆ ಎಂದೂ ಹೇಳಿಕೊಂಡಿದ್ದಾರೆ.

ತಾನು ವಾಸಿಸುವ ಮನೆಯಲ್ಲಿ ನಾಯಿ, ಎರಡು ಬೆಕ್ಕು, ಮುಂಗುಸಿ ಹಾಗೂ ಹಲವು ಪಕ್ಷಿಗಳಿವೆ. ಆ ಮನೆ ಅವುಗಳಿಗೆ ಸೇರಿದ್ದೇ ಹೊರತು ತನ್ನದಲ್ಲ. ತಾನು ಆ ಪ್ರಾಣಿಗಳನ್ನು ನೋಡಿಕೊಳ್ಳುತ್ತೇನಷ್ಟೇ” ಎಂದು ತಿಳಿಸಿದ್ದಾರೆ.

ಕೃಪೆ : ANI

Leave a Reply

Your email address will not be published. Required fields are marked *

*