Cnewstv / 26.01.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಆಯನೂರು ಮಂಜುನಾಥ್ ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಮನವಿ.
ಶಿವಮೊಗ್ಗ : ಆಯನೂರು ಮಂಜುನಾಥ್ ರವರ ಬಗ್ಗೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಶಿವಮೊಗ್ಗ ನಗರ ಉತ್ತರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶಿವಮೊಗ್ಗ ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು.
ಪತ್ರದಲ್ಲಿ ಏನಿದೆ ??
ಗೌರವಾನ್ವಿತ ಜಿಲ್ಲಾಧ್ಯಕ್ತರೇ.. ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಇತ್ತೀಚೆಗಷ್ಟೇ ಕಾಂಗ್ರೆಸ್
ಸೇರ್ಪಡೆಗೊಂಡಿರುವ ಹಾಗೂ ಇಂದಿಗೂ ಬಿಜೆಪಿ ಮನಸ್ಥಿತಿಯಲ್ಲಿಯೇ ಇರುವ ಪರಾಂತರಿ ಆಯನೂರು ಮಂಜುನಾಥ್ ಅವರು ಉದ್ದೇಶಪೂರ್ವಕವಾಗಿ ಮೂಲ ಕಾಂಗ್ರೆಸ್ ನಾಯಕರನ್ನು ಅವಮಾನಿಸುತ್ತಿರುವುದು ನಿಮಗೆ ತಿಳಿದಿರುವ ವಿಚಾರ ಇತ್ತೀಚೆಗೆ ಅವರು ನಡೆಸಿರುವ ಪತ್ರಿಕಾಗೋಷ್ಠಿಯಲ್ಲಿ ಯುವ ನಾಯಕ, ವಿಧಾನಸಭಾ ಚುನಾವಣೆಯ ನಿಕಟಪೂರ್ವ ಕಾಂಗ್ರೆಸ್ ಅಭ್ಯರ್ಥಿ
ಹೆಚ್.ಸಿ.ಯೋಗೀಶ್ ಅವರನ್ನು “ Who is he” ಎನ್ನುವ ಮೂಲಕ ಅವಮಾನಿಸಿರುವುದು ಸಹಿಸಲು ಸಾಧ್ಯವಿಲ್ಲ.
ಎಚ್.ಸಿ.ಯೋಗೀಶ್ ಅವರದ್ದು ಮೂಲತಃ ಕಾಂಗ್ರೆಸ್ ಕುಟುಂಬ, ಅವರ ಅಪ್ಪ ಮಲ್ಲಿಕಾರ್ಜುನಪ್ಪನವರು
ಶಾಸಕರಾಗಿದ್ದವರು, ಅವರ ತಂದೆ ಎಚ್.ಎಂ. ಚಂದ್ರಶೇಖರಪ್ಪನವರು ಶಾಸಕರಾಗಿದ್ದವರು. ಯೋಗೀಶ್ ಅವರು ಮೂರು ಬಾರಿ ಮಹಾನಗರ ಪಾಲಿಕೆ ಸದಸ್ಯರಾಗಿ, ಪಾಲಿಕೆ ವಿರೋಧಪಕ್ಷದ ನಾಯಕರಾಗಿ ಕೆಲಸ ಮಾಡಿದವರು ಇಂತಹ ಕಟುಂಬದ ಹಿನ್ನೆಲೆಯಿಂದ ಬಂದಂತಹವರನ್ನು “ಎಚ್.ಸಿ.ಯೋಗೀಶ್” ಯಾರು ಎಂದು ಕೇಳುವುದು ಅವರನ್ನು ಅವಮಾನಿಸುವ ಉದ್ದೇಶದಿಂದಲೇ ಹೊರತು ಮತ್ತೇನು ಅಲ್ಲ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಯನೂರು ಮಂಜುನಾಥ್ ಅವರು ಕೇವಲ 7,000 ಮತ ಪಡೆದಿದ್ದಾರೆ.ಆದರೆ ಎಚ್.ಸಿ.ಯೋಗೀಶ್ ಅವರು ಆಯನೂರು ಅವರಿಗಿಂತ 10 ಪಟ್ಟು, ಅಂದರೆ ಸುಮಾರು 70,000 ದಷ್ಟು ಮತ ಪಡೆದಿದ್ದಾರೆ. ಇಂತಹ ವ್ಯಕ್ತಿ ಯಾರೆಂದು ಗೊತ್ತಿಲ್ಲದೇ ಆಯನೂರು ಮಂಜುನಾಥ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆಯೇ..? ಎಚ್.ಸಿ.ಯೋಗೀಶ್ ಅವರ ಕುಟುಂಬ ಕಾಂಗ್ರೆಸ್ ಪಕ್ಷಕ್ಕೆ ತಮ್ಮದೇ ಆದ ಸೇವೆ ಸಲ್ಲಿಸಿದ. ಆದರೆ, ಆಯನೂರು ಮಂಜುನಾಥ್ ಅವರು ಕಾಂಗ್ರೆಸ್ ಪಕ್ಷಕ್ಕೆ ನೀಡಿರುವ ಕೊಡುಗೆಯಾದರೂ ಏನಿದೆ? ಎಲ್ಲಿಯೂ ನೆಲೆ ಸಿಗರ ಅತಂತ್ರರಾಗಿದ್ದ ಅವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಬಂದು, ಇಲ್ಲಿನ ನಾಯಕರನ್ನು ಅವಮಾನಿಸುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಆಯನೂರು ಮಂಜುನಾಥ್ ಅವರು ಈ ಹಿಂದೆ ರಾಹುಲ್ ಗಾಂಧಿ, ಸೋನಿಯಾಗಾಂಧಿ, ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಅವರು ಸೇರಿದಂತೆ ಕಾಂಗ್ರೆಸ್‌ನ ಪ್ರಮುಖ ನಾಯಕರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಅಡಿ ನಮ್ಮ ನಾಯಕರನ್ನು ಅವಮಾನಿಸಿದ್ದರು. ಇದೀಗ ಕಾಂಗ್ರೆಸ್ ಪಕ್ಷಕ್ಕೆ ಬಂದರೂ ಅವರ ಬಿಜೆಪಿಯ ಮನಸ್ಥಿತಿ ಹೋಗಿಲ್ಲ. ಈಗಲೂ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಟ್ಟುಕೊಂಡು ಅವಮಾನಿಸುತ್ತಿದ್ದಾರೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಇದನ್ನು ಒದಿ..
Recent Comments