ಶಿರಾಳಕೊಪ್ಪ ಪೋಲಿಸರ ಭರ್ಜರಿ ಕಾರ್ಯಾಚರಣೆ, ಶಮೀಲ್ ನಲ್ಲಿ ಸಿಕ್ತು, ಆಕ್ರಮವಾಗಿ ತಂದಿಟ್ಟ ಒಂಟೆ.‌

Cnewstv / 22.06.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಶಿರಾಳಕೊಪ್ಪ ಪೋಲಿಸರ ಭರ್ಜರಿ ಕಾರ್ಯಾಚರಣೆ, ಶಮೀಲ್ ನಲ್ಲಿ ಸಿಕ್ತು, ಆಕ್ರಮವಾಗಿ ತಂದಿಟ್ಟ ಒಂಟೆ.‌

ಶಿವಮೊಗ್ಗ : ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದಲ್ಲಿ ಇರುವ ಸೈಯದ್ ಬಿಲಾಲ್ ಎಂಬುವ ವ್ಯಕ್ತಿಗೆ ಸೇರಿದ ರೆಹಮಾನಿಯಾ ಶಮೀಲ್ ನಲ್ಲಿ ಒಂಟೆ ಪತ್ತೆಯಾಗಿದೆ.

ಬಕ್ರಿದ್ ಹಬ್ಬಕ್ಕೆ ಒಂಟೆಯನ್ನು ಕಡಿಯುವ ಉದ್ದೇಶದಿಂದ ಒಂಟೆಯನ್ನು ಅಕ್ರಮವಾಗಿ ತಂದು ಇಡಲಾಗಿತ್ತು ಎನ್ನಲಾಗಿದೆ.

 

 

ಈ ಕುರಿತು ಖಚಿತ ಮಾಹಿತಿ ಮೇರೆಗೆ ಶಿರಾಳಕೊಪ್ಪ ಪಟ್ಟಣ ಪೋಲಿಸರು ದಾಳಿ ನಡೆಸಿ ಪ್ರಾಣಿ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಒಂಟೆಯನ್ನು ರಕ್ಷಿಸಿದ್ದಾರೆ.

ಸೈಯದ್ ಬಿಲಾಲ್‌ ಎಂಬ ವ್ಯಕ್ತಿ ಈ‌ ರೀತಿ ಈ ಹಿಂದೆ ಆಕ್ರಮವಾಗಿ ಜಿಂಕೆ ಮರಿಯನ್ನು ತನ್ನ ಶಾಮಿಲ್‌ ನಲ್ಲಿ ಕಟ್ಟಿ ಹಾಕಿದ ಈ ಕುರಿತು ಪ್ರಕರಣ ಕೂಡ ದಾಖಲಾಗಿತ್ತು. ಮತ್ತೆ‌ ಒಂಟಿಯನ್ನು ತಂದು ಶಾಮಿಲ್‌ ನಲ್ಲಿ ಅಕ್ರಮವಾಗಿ ಇಡಲಾಗಿದೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*