Breaking News

ಮೇಳೈಸೋ ಮೇಳಕ್ಕೆ ಹೋಗಿಬರೋಣ ಬನ್ನಿ 

Synchronization (Sync) ಎಂಬ ಪದದ ಅರ್ಥ ಮೇಳೈಸುವಿಕೆ ಅಂತ. ಒಂದು ಕೆಲಸ ಆಗಬೇಕಾದಾಗ ಅದಕ್ಕೆ ಹೊಂದಿಕೊಂಡಂಥ ಎರಡು ಅಥವಾ ಹೆಚ್ಚು ಕ್ರಿಯೆಗಳು ಕ್ರಮಬದ್ದವಾಗಿ, ಲಯಬದ್ಧವಾಗಿ, ಏಕಕಾಲದಲ್ಲಿ ಉಂಟಾಗಿ ಕಾರ್ಯ ಪೂರ್ಣಗೊಳ್ಳುವ ಕ್ರಿಯೆಗೆ ಮೇಳೈಸುವಿಕೆ ಎನ್ನುತ್ತಾರೆ. ಒಂದು ಸಣ್ಣ ಉದಾಹರಣೆ ಕೊಡುತ್ತೇನೆ. ಇಬ್ಬರ ಭೇಟಿಯಾದಾಗ ಹಲೋ ಎನ್ನುತ್ತಾ ಒಬ್ಬಾತ ಕೈ ಚಾಚುತ್ತಾನೆ. ಕಾರ್ಯ sync ಆದರೆ ಆ ಕಡೆಯ ಮತ್ತೊಬ್ಬನೂ ಕೈ ಚಾಚಿ ಕೈ ಕುಲುಕಿದಲ್ಲಿ ಕಾರ್ಯ ಸಮರ್ಪಕವಾಗಿ ಪೂರ್ಣವಾಗುತ್ತದೆ. Sync ಆಗದೇ ಹೋದಾಗ ಏನಾಗುತ್ತೆ? ಇಬ್ಬರ ಭೇಟಿಯಾಗಿ ಪರಿಚಯವಾದಾಗ ಮೊದಲಾತ ಕೈ ಚಾಚದೆ ಇದ್ದರೆ ಅಥವಾ ಮೊದಲಿಗ ಕೈಚಾಚಿದ್ದರೂ ಆ ಮತ್ತೊಬ್ಬ ಕೈ ನೀಡದೇ ಹೋದಾಗ ಅವರಲ್ಲೇನೋ ಮನಸ್ತಾಪ ಇದೆಯೇನೋ ಎಂಬ ಅರ್ಥ ಬರುತ್ತದೆ. Sync ಆಗದೇ ಹೋದಾಗ ಎಡ್ವಟ್ಟಾಗೋದಕ್ಕೆ asynchronus ಅನ್ನಲೇ ಬೇಕಿಲ್ಲ.

Leave a Reply

Your email address will not be published. Required fields are marked *

*